ಫುಡ್ ಆರ್ಡರ್ ಮಾಡುವ ಮುನ್ನ ಎಚ್ಚರ!

ಗುರುವಾರ, 18 ಆಗಸ್ಟ್ 2022 (11:12 IST)
ಚೆನ್ನೈ : ಜನಪ್ರಿಯ ರೆಸ್ಟೋರೆಂಟ್ನಲ್ಲಿ ಆರ್ಡರ್ ಮಾಡಿದ್ದ ಊಟದಲ್ಲಿ ಹುಳುಗಳು ಕಂಡು ಬಂದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ.
 
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಮಹಿಳೆಯನ್ನು ಅಶೋಕ್ ನಗರದ ನಿವಾಸಿ ರಾಣಿ ಎಂದು ಗುರುತಿಸಲಾಗಿದೆ. ಮಹಿಳೆ ತಮ್ಮ ಮಗನೊಂದಿಗೆ ಮಾಲ್ಗೆ ಹೋಗಿದ್ದರು.

ಈ ವೇಳೆ ಮಾಲ್ನಲ್ಲಿದ್ದ ‘ನಮ್ಮ ವಿದ್ಯಾ ಎಂಬ ಹೆಸರಿನ ರೆಸ್ಟೋರೆಂಟ್ಗೆ ತೆರಳಿದರು. ಅಲ್ಲಿ ಮಗನ ಇಚ್ಛೆಯಂತೆ ಚೋಲಾ ಪೂರಿ ಆರ್ಡರ್ ಮಾಡಿದರು. ಆದರೆ ಊಟ ಬಂದ ನಂತರ ಆಹಾರದಲ್ಲಿ ಹುಳು ಹರಿದಾಡುತ್ತಿರುವುದನ್ನು ಗಮನಿಸಿ ಕಿರುಚಾಡಿದ್ದಾರೆ.

ವಸಂತ ಭವನ ರೆಸ್ಟೊರೆಂಟ್ ಚೆನ್ನೈನ ಕೊಯಾಂಬೆಡು ಪ್ರದೇಶದಲ್ಲಿರುವ ಫೇಮಸ್ ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಈ ಬಗ್ಗೆ ಮಹಿಳೆ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಇದೀಗ ಆಹಾರ ಸುರಕ್ಷತಾ ಅಧಿಕಾರಿಗಳು ರೆಸ್ಟೋರೆಂಟ್ ಮತ್ತು ಕಿಚನ್ ಕೆಲಸದ ಮೇಲೆ ತಾತ್ಕಾಲಿಕವಾಗಿ ನಿಷೇಧವನ್ನು ವಿಧಿಸಿದ್ದಾರೆ ಮತ್ತು ಆಹಾರ ಸುರಕ್ಷತಾ ಕಾಯ್ದೆಗೆ ಅನುಗುಣವಾಗಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ