ತನ್ನ ಕಾರು ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ ಆ್ಯಸಿಡ್ ಹಾಕಿ ಸುಟ್ಟ ವೈದ್ಯ. ಕಾರಣವೇನು ಗೊತ್ತಾ?

ಶುಕ್ರವಾರ, 8 ಫೆಬ್ರವರಿ 2019 (06:57 IST)
ಭೋಪಾಲ್ : ವೈದ್ಯನೊಬ್ಬ ತನ್ನ ಕಾರು ಚಾಲಕನನ್ನು  ತುಂಡು ತುಂಡಾಗಿ ಕತ್ತರಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಆ್ಯಸಿಡ್ ಹಾಕಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಹೋಶಂಗಾಬಾದಿನಲ್ಲಿ ನಡೆದಿದೆ.


ಡಾ. ಸುನೀಲ್ ಮಂತ್ರಿ(56) ಕೊಲೆ ಮಾಡಿರುವ ಆರೋಪಿ ವೈದ್ಯ. ವಿರೇಂದ್ರ ಪಾಚೌರಿ(30) ಕೊಲೆಯಾದ ಕಾರು ಚಾಲಕ. ವೀರೇಂದ್ರ, ವೈದ್ಯ ಸುನೀಲ್ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ವೈದ್ಯನ ಪತ್ನಿ ತೀರಿಹೋದ ನಂತರ ಅವರು ನಡೆಸುತ್ತಿದ್ದ ಬಟ್ಟೆ ಅಂಗಡಿಯನ್ನು ಚಾಲಕನ ಪತ್ನಿ ವಹಿಸಿಕೊಂಡಿದ್ದಳು. ಚಾಲಕನ ಪತ್ನಿಯ ಜೊತೆ ಆತ್ಮೀಯವಾಗಿದ್ದ ವೈದ್ಯ ಆಕೆಯ ಜೊತೆ ಅಕ್ರಮ ಸಂಬಂಧ  ಹೊಂದಿದ್ದನು.


ಈ ವಿಚಾರ ತಿಳಿದು ಚಾಲಕ ಪತ್ನಿಯನ್ನು ದೂರವಿಟ್ಟ ಕಾರಣ ಕೋಪಗೊಂಡ ವೈದ್ಯ ಮನೆಯಲ್ಲಿಯೇ ಚಾಲಕನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ತನ್ನ ವಿರುದ್ಧ ಯಾವುದೇ ಸಾಕ್ಷಿ ಸಿಗಬಾರದೆಂದು ಮೃತದೇಹವನ್ನು ಆ್ಯಸಿಡ್ ಹಾಕಿ ಸುಟ್ಟುಹಾಕಿದ್ದಾನೆ.


ಅಕ್ಕಪಕ್ಕದ ಮನೆಯವರಿಗೆ ವೈದ್ಯನ ನಡವಳಿಕೆಯ ಬಗ್ಗೆ ಅನುಮಾನ ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ತುಂಡು ತುಂಡಾಗಿ ಕತ್ತರಿಸಿದ ಮೃತದೇಹದ ಭಾಗಗಳಿಗೆ ಆ್ಯಸಿಡ್‍ ಹಾಕುತ್ತಿರುವಾಗ  ವೈದ್ಯ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿ ಸತ್ಯಾಂಶವನ್ನು ಬಾಯಿಬಿಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ