ನವದೆಹಲಿ: ಕೊರೋನಾವೈರಸ್ ತಡೆಗೆ ಲಾಕ್ ಡೌನ್ ಆದ ಬಳಿಕ ದೇಶದಾದ್ಯಂತ ಮಹಿಳೆಯರ ಮೇಲಿನ ಗೃಹಹಿಂಸೆ ಪ್ರಕರಣಗಳು ಹೆಚ್ಚಾಗಿವೆ ಎಂಬ ಅಂಶ ಬೆಳಕಿಗೆ ಬಂದಿವೆ.
ಲಾಕ್ ಡೌನ್ ಆದ ಬಳಿಕ ಗಂಡಂದಿರ ಅವಸ್ಥೆ ಬಳಿಕ ಹಲವು ಜೋಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರಬಹುದು. ಆದರೆ ನಿಜವಾಗಿಯೂ ಪರಿಸ್ಥಿತಿ ಬೇರೆಯೇ ಇದೆ.
ಮಾರ್ಚ್ 24 ರಿಂದ ಅಂದರೆ ಲಾಕ್ ಡೌನ್ ಆದ ದಿನದಿಂದ ಉದ್ಯೋಗಸ್ಥ ಪತಿಯಂದಿರೂ ಮನೆಯಲ್ಲೇ ಇದ್ದು, ಹೊರಹೋಗಲಾಗದ ಅಸಹಾಯಕತೆಯನ್ನು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ತೀರಿಸಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸಮೀಕ್ಷೆ ಬಹಿರಂಗಪಡಿಸಿದೆ.
ಮಾರ್ಚ್ 23 ರಿಂದ 30 ರೊಳಗಾಗಿ ತನಗೆ 58 ಗೃಹಹಿಂಸೆ ಪ್ರಕರಣಗಳು ಬಂದಿವೆ. ಅದರಲ್ಲೂ ಹೆಚ್ಚಾಗಿ ಉತ್ತರ ಭಾರತದಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಆಯೋಗ ಹೇಳಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯೇ ಸರಿ.