ನವದೆಹಲಿ : ಜಾರಿ ನಿರ್ದೇಶನಾಲಯ(ಇಡಿ) ಇಕ್ಕಳದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರೆಸ್ಟ್ ಆಗ್ತಾರಾ ಅನ್ನೋ ಅನುಮಾನವೊಂದು ಹುಟ್ಟಿಕೊಂಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಇಡಿ ಡ್ರಿಲ್ ಮುಂದುವರಿದಿದ್ದು, ಇನ್ನೂ ಇಡಿ ಕಚೇರಿಯಲ್ಲೇ ಇದ್ದಾರೆ. ಮಧ್ಯರಾತ್ರಿವರೆಗೆ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.
5ನೇ ದಿನವಾದ ಇಂದು ಕೂಡ ಬೆಳಗ್ಗೆಯಿಂದ ಇಡಿ ಕಚೇರಿಯಲ್ಲೇ ರಾಗಾ ಇದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ರಾಹುಲ್ ಬಂಧನಕ್ಕೆ ಸಿದ್ಧವಾಗಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ.
ಇಂದು ಬೆಳಗ್ಗೆ 11 ಗಂಟೆಗೆ ರಾಗಾ ವಿಚಾರಣೆ ಹಾಜರಾಗಿದ್ದಾರೆ. ರಾತ್ರಿ 8:30ರ ವೇಳೆಗೆ ಇಡಿ ಅಧಿಕಾರಿಗಳು ರಾಹುಲ್ಗೆ ವಿರಾಮ ನೀಡಿದರು. ಈ ಮೂಲಕ ಇಡೀ ದಿನ ನಿರಂತರ ವಿಚಾರಣೆ ನಡೆಸಿ ಅರ್ಧ ಗಂಟೆ ವಿರಾಮ ನೀಡಲಾಗಿತ್ತು.
ಇದೀಗ ವಿರಾಮದ ಬಳಿಕ ಮತ್ತೆ ವಿಚಾರಣೆ ಮುಂದುವರಿದಿದೆ. ತಡ ರಾತ್ರಿಯವರೆಗೂ ಇಡಿ ಡ್ರಿಲ್ ಮಾಡುತ್ತಿರುವುದರಿಂದ ರಾಗಾ ಬಂಧಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರಾ ಅನ್ನೋ ಕುತೂಹಲ ಮೂಡಿದೆ.