ನವದೆಹಲಿ: ಇನ್ನೇನು ಲೋಕಸಭೆ ಚುನಾವಣೆ ಪ್ರಚಾರದ ಅಬ್ಬರ ಜೋರಾಗಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಪ್ರಧಾನಿ ಮೋದಿ ಬಗ್ಗೆ ಹಿಂದೆ ಮಾಡಿದಂತಹ ಅವಹೇಳನಕಾರೀ ಕಾಮೆಂಟ್ ಮಾಡದಂತೆ ಮೊದಲೇ ಎಚ್ಚರಿಕೆ ನೀಡಿದೆ.
ಈ ಮೊದಲು ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಸೋತಾಗ ರಾಜಸ್ಥಾನ್ ಚುನಾವಣಾ ರಾಲಿಯಲ್ಲಿ ರಾಹುಲ್ ಗಾಂಧಿ ಮೋದಿ ಪನೌತಿ (ಲತ್ತೆ) ಎಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮತ್ತೊಮ್ಮೆ ಮೋದಿಯನ್ನು ಪಿಕ್ ಪಾಕೆಟರ್ ಎಂದಿದ್ದರು. ರಾಹುಲ್ ಈ ಕಾಮೆಂಟ್ ಗಳ ಬಗ್ಗೆ ದೂರು ದಾಖಲಾಗಿತ್ತು.
ಇದೀಗ ಚುನಾವಣಾ ಆಯೋಗ ಮೊದಲೇ ರಾಹುಲ್ ಗಾಂಧಿಗೆ ಇಂತಹ ಕಾಮೆಂಟ್ ಮಾಡದಂತೆ ಎಚ್ಚರಿಕೆ ನೀಡಿದೆ. ಈ ಬಾರಿ ಯಾವುದೇ ನಾಯಕರು ಇಂತಹ ತಪ್ಪುಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕವಾಗಿ ಚುನಾವಣಾ ಪ್ರಚಾರ ಮಾಡುವಾಗ ನಾಲಿಗೆ ಹಿಡಿತದಲ್ಲಿರಬೇಕು ಎಂದು ಎಚ್ಚರಿಕೆ ನೀಡಿದೆ.
ಈ ಮೊದಲು ರಾಹುಲ್ ಗಾಂಧಿ ಮಾಡಿದ್ದ ಪನೌತಿ, ಪಿಕ್ ಪಾಕೆಟರ್ ಕಾಮೆಂಟ್ ಗಳು ಕೋರ್ಟ್ ವರೆಗೂ ತಲುಪಿತ್ತು. ರಾಹುಲ್ ಗಾಂಧಿ ಈ ಶಬ್ಧಗಳನ್ನು ಬಳಸಿದ್ದು ಖಂಡನೀಯ ಎಂದು ಕೋರ್ಟ್ ಹೇಳಿತ್ತು. ಲೋಕಸಭೆ ಚುನಾವಣೆ ಭರದಲ್ಲಿ ಮತ್ತೆ ಇಂತಹ ತಪ್ಪು ಮಾಡದಂತೆ ಮೊದಲೇ ಎಚ್ಚರಿಕೆ ನೀಡಲಾಗಿದೆ.