ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಪ್ರಸಿದ್ಧ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಒಂದಲ್ಲ ಒಂದು ಬದಲಾವಣೆ ತರುತ್ತಲೇ ಇದ್ದಾರೆ.
ಇದೀಗ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಶೀಘ್ರದಲ್ಲೇ ಟ್ವಿಟ್ಟರ್ನ ಹೊಸ ಲೋಗೋವನ್ನು ಲಾಂಚ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ಟ್ವಿಟರ್ ಲೋಗೋವನ್ನು ಬದಲಾಯಿಸುವ ಉದ್ದೇಶವನ್ನು ಪ್ರಕಟಿಸಿದ್ದಾರೆ.
“ಶೀಘ್ರದಲ್ಲೇ ನಾವು ಟ್ವಿಟ್ಟರ್ ಬ್ರ್ಯಾಂಡ್ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ,” ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್ನ ಲೋಗೋ ಪಕ್ಷಿ ಆಗಿದ್ದು ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ.