`ನಾನು ಜಯಲಲಿತಾ ಪುತ್ರ, ಆಸ್ತಿ ನನಗೇ ಸೇರಬೇಕು’

ಬುಧವಾರ, 15 ಮಾರ್ಚ್ 2017 (17:58 IST)
ಜಯಲಲಿತಾ ಅವರ ಸಾವಿನ ಬಳಿಕ ಅವರ ಸಾವಿನ ನಿಗೂಢತೆ ಮತ್ತು ಆಸ್ತಿಯ ವಾರಸುದಾರರ ಕುರಿತಂತೆ ಒಂದಿಲ್ಲೊಂದು ಸುದ್ದಿಗಳು ಹರಿದಾಡುತ್ತಿವೆ. ಇದೀಗ, ಈರೋಡ್ ಮೂಲದ ಕೃಷ್ಣಮೂರ್ತಿ ಎಂಬಾತ ನಾನು ಜಯಲಲಿತಾ ಪುತ್ರ ಎಂದು ಹೇಳಿಕೊಂಡು ಬಂದಿದ್ದಾನೆ.

ನಾನೇ ಜಯಲಲಿತಾ ಅವರ ಪುತ್ರ ನನ್ನ ಅಮ್ಮನನ್ನ ಕೊಲೆ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ.

ಯಾರಿವನು..?: ಅವನೇ ಹೇಳಿಕೊಂಡಿರುವ ಪ್ರಕಾರ, ಈತ ಜಯಲಲಿತಾ ಅವರ ಪುತ್ರನಂತೆ. ಸೆಪ್ಟೆಂಬರ್ 14, 2016ರಂದು ಜಯಲಲಿತಾ ಮನೆಗೆ ಬಂದಿದ್ದ ಈತ ಅಮ್ಮನ ಜೊತೆ ಪೋಯಸ್ ಗಾರ್ಡನ್ ನಿವಾಸದಲ್ಲಿ 4 ದಿನ ಇದ್ದನಂತೆ. ಅಮ್ಮ ತನ್ನನ್ನು ಮಗನೆಂದು ಜಗತ್ತಿಗೆ ಪರಿಚಯಿಸಲು ಸಿದ್ಧರಾದಾಗ ಶಶಿಕಲಾ ವಿರೋಧಿಸಿದ್ದರಂತೆ. ಈ ಸಂದರ್ಭ ನಡೆದ ಜಗಳದಲ್ಲಿ ಶಶಿಕಲಾ, ಅಮ್ಮನನ್ನ ಮೆಟ್ಟಿಲಿಂದ ಕೆಳಗೆ ನೂಕಿದರಂತೆ. ಈ ಸಂದರ್ಭ ಗಾಯಗೊಂಡು ಅಮ್ಮ ಆಸ್ಪತ್ರೆ ಸೇರಿದರು.

ಜೀವಭಯದಿಂದ ಈ ವಿಷಯ ಹೇಳಲು ಹಿಂಜರೆದಿದ್ದೆ. ಈಗ ಶಶಿಕಲಾ ಇಲ್ಲದ ಕಾರಣ ಸತ್ಯ ಹೇಳುತ್ತಿದ್ದೇನೆ. ನಾನೊಬ್ಬನೇ ಜಯಲಲಿತಾ ಪುತ್ರ, ಆಸ್ತಿ ನನಗೇ ಸೇರಬೇಕೆಂದು ವಾದಿಸಿದ್ದಾನೆ. ನಾನು ಜಯಲಲಿತಾ ಮಗನಾಗಿದ್ದು ಜಯಲಲಿತಾ ಸ್ನೇಹಿತೆ ವನಿತಾಮಣಿ ಮನೆಯಲ್ಲಿ ಬೆಳೆದಿದ್ದಾಗಿಯೂ ಹೇಳಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ