ನಾಳೆಯಿಂದ ಹಳೆಯ 500ರೂ ನೋಟನ್ನು ಬಳಸಲಾಗಲ್ಲ

ಗುರುವಾರ, 15 ಡಿಸೆಂಬರ್ 2016 (15:59 IST)
ಹಳೆಯ 500ರ ನೋಟು ಬಳಸಲು ಇಂದು ಕೊನೆಯ ದಿನವಾಗಿದ್ದು, ರಾತ್ರಿ 12ರ ಬಳಿಕ ನೀವು 500 ರೂಪಾಯಿಯನ್ನು ಬಳಸಲಾಗುವುದಿಲ್ಲ. 
ನವೆಂಬರ್ 8 ರಂದು ಹಳೆಯ 500 ಮತ್ತು 1,000 ರೂಪಾಯಿ ನೋಟುಗಳ ಮೇಲೆ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಡಿಸೆಂಬರ್ 15ರವರೆಗೆ ಬಿಲ್ ಪಾವತಿ ಮಾಡಲು, ಔಷಧ ಖರೀದಿಸಲು, ರೈಲು ನಿಲ್ದಾಣ, ಬಸ್ ಟಿಕೆಟ್ ಬುಕ್ಕಿಂಗ್, ಆಸ್ಪತ್ರೆ, ಹಾಲಿನ ಬೂತ್, ರುದ್ರಭೂಮಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳ ಫೀಸ್ ಕಟ್ಟಲು ಮತ್ತು ಇನ್ನಿತರ ಆಯ್ದ ಸ್ಥಳಗಳಲ್ಲಿ ಹಳೆಯ 500 ರೂಪಾಯಿ ನೋಟ್ ಚಲಾವಣೆಗೆ ಅವಕಾಶ ನೀಡಿತ್ತು. ಈ ಅವಧಿಯನ್ನು ವಿಸ್ತರಣೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೆಟ್ರೋಲ್ ಪಂಪ್‌ಗಳಲ್ಲಿ 500 ರೂಪಾಯಿ ಬಳಕೆ ಸೌಲಭ್ಯವನ್ನು ಕೇಂದ್ರ ಡಿಸೆಂಬರ್ 2ರ ಮಧ್ಯರಾತ್ರಿ ಹಿಂತೆಗೆದುಕೊಂಡಿತ್ತು. 
 
ಹಳೆಯ ನೋಟುಗಳ ಬಳಕೆ ಡಿಸೆಂಬರ್ 15ರ ಮಧ್ಯರಾತ್ರಿ ಕೊನೆಗೊಳ್ಳಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಟ್ವೀಟ್ ಮಾಡಿದ್ದಾರೆ. 
 
500ರ ನೋಟುಗಳನ್ನು ಬಳಸಲಾಗುವುದಿಲ್ಲ ಆದರೆ ತಿಂಗಳಾಂತ್ಯದವರೆಗೆ ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ಯಾವುದೇ ಅಡ್ಡಿ ಇರುವುದಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ