ನವದೆಹಲಿ : ಕೈಗಾರಿಕಾ ವಲಯಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಲು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಸಣ್ಣ, ಮಧ್ಯಮ ಕೈಗಾರಿಕೆ, ಸೇವಾ ವಲಯ, ರಪ್ತು ಉದ್ಯಮಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.. ಸಣ್ಣ, ಮಧ್ಯಮ ಕೈಗಾರಿಕೆಗೆ 15,000ಕೋಟಿ ಸಾಲ ನಿರೀಕ್ಷೆಯಿದ್ದು, ಬೇರೆ ಬೇರೆ ಇಲಾಖೆ ಜತೆ ನಿರ್ಮಲಾ ಸೀತಾರಾಮನ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ದೇಶದ ಜಿಡಿಪಿಯ ಶೇ.3-5ರಷ್ಟು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲು ಉದ್ಯಮ ವಲಯದ ಬೇಡಿಕೆ ಇಟ್ಟಿದೆ. ಈಗಾಗಲೇ ಜನಸಾಮಾನ್ಯರಿಗೆ 1.7ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಇದು ದೇಶದ ಜಿಡಿಪಿಯ ಶೇ.0.85ರಷ್ಟು ಮಾತ್ರ. ಆದರೆ ಅಮೇರಿಕ ದೇಶದ ಜಿಡಿಪಿಯ ಶೇ.10ರಷ್ಟನ್ನು ಘೋಷಿಸಿದೆ ಎನ್ನಲಾಗಿದೆ.