ಮಕ್ಕಳನ್ನು ಲೈಂಗಿಕತೆಗಾಗಿ ಬಳಕೆ: ನಿರ್ಮಾಪಕ ಕಿಡಿ

ಸೋಮವಾರ, 4 ಡಿಸೆಂಬರ್ 2023 (23:08 IST)
ಗೋವಾ ರಾಜ್ಯದಲ್ಲಿ ಪ್ರತಿದಿನ ನಾಲ್ಕು ಮಕ್ಕಳು ಲೈಂಗಿಕ ಕ್ರಿಯೆಗಾಗಿ ಪೀಡಿಸಲಾಗುತ್ತಿದೆ ಎಂದು ಸರಕಾರವೇ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನಿರ್ಮಾಪಕರೊಬ್ಬರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಗೋವಾದ ಬೀಚ್‌ಗಳಲ್ಲಿ 50 ರೂಪಾಯಿಗಳಿಗೆ ಅಪ್ರಾಪ್ತ ವಯಸ್ಕರೊಂದಿಗೆ  ಸೇವೆ ದೊರೆಯುತ್ತಿದೆ ಎಂದು ಬಾಗಾ ಬೀಚ್ ಚಿತ್ರದ ನಿರ್ಮಾಪಕರೊಬ್ಬರು ಆರೋಪಿಸಿದ್ದಾರೆ.
 
ಗೋವಾ ಪ್ರವಾಸೋದ್ಯಮದ ಮತ್ತೊಂದು ಮುಖ ಎನ್ನುವ ವಿಷಯಾಧಾರಿತ ಚಿತ್ರ ನಿರ್ಮಿಸುತ್ತಿರುವ ಸಲಗಾಂವಕರ್, ಚೈಲ್ಡ್ ಸೆಕ್ಸ್‌ಗಾಗಿ 50 ರೂಪಾಯಿ ನೀಡುವಂತೆ ವೇಶ್ಯೆಯರು ಒತ್ತಾಯಿಸುತ್ತಿದ್ದಾರೆ ಎಂದು ಹಂಗೇರಿಯ ಪ್ರವಾಸಿ ದೂರಿದ್ದನು ಎಂದು ಹೇಳಿದ್ದಾರೆ.
 
ಪ್ರಸ್ತುತ ಸಮಯದಲ್ಲಿ ಚಿಕನ್ ಕೂಡಾ 50 ರೂಪಾಯಿಗಳಿಗೆ ದೊರೆಯುವುದಿಲ್ಲ. ಆದರೆ, ಚಿಕ್ಕಮಕ್ಕಳು ಲೈಂಗಿಕ ಕ್ರಿಯೆಯಂತಹ ಪೀಡೆಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ