ಅಮಿತ್ ಶಾ ಹೆಸರಿನಲ್ಲಿ ನಕಲಿ ಲಸಿಕಾ ಪ್ರಮಾಣಪತ್ರ!

ಶನಿವಾರ, 18 ಡಿಸೆಂಬರ್ 2021 (12:59 IST)
ಲಕ್ನೋ : ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಅಮಿತ್ ಶಾ, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಹೆಸರಿನ ನಕಲಿ ಕೋವಿಡ್ ಲಸಿಕಾ ಪ್ರಮಾಣಪತ್ರವನ್ನು ನೀಡಲಾಗಿದೆ.

ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಪ್ರಮಾಣಪತ್ರಗಳನ್ನು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ತಖಾ ತಹಸಿಲ್ನಲ್ಲಿರುವ ಆರೋಗ್ಯ ಕೇಂದ್ರದಿಂದ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿದ ಅಧಿಕಾರಿಯೊಬ್ಬರು ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದಿದ್ದಾರೆ.

ಪ್ರಮಾಣಪತ್ರದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ನಿತಿನ್ ಗಡ್ಕರಿ, ಹಾಗೂ ಪಿಯೂಷ್ ಗೋಯಲ್ ಅವರ ಹೆಸರು ಹೋಲುತ್ತದೆ. ನಕಲಿ ಲಸಿಕೆ ಪ್ರಮಾಣಪತ್ರದಲ್ಲಿ ಅಮಿತ್ ಶಾ ಅವರ ವಯಸ್ಸು 33, ನಿತಿನ್ ಗಡ್ಕರಿ ಅವರ ವಯಸ್ಸು 30, ಪುಷ್ಯು ಗೋಯಲ್ ಅವರ ವಯಸ್ಸು 37 ಹಾಗೆಯೇ ಓಂ ಬಿರ್ಲಾ ಅವರ ವಯಸ್ಸು 26 ಎಂದು ನಮೂದಿಸಲಾಗಿದೆ. 

ಈ ವ್ಯಕ್ತಿಗಳ ಮೊದಲ ಡೋಸ್ ಅನ್ನು ಡಿಸೆಂಬರ್ 12ರಂದು ನೀಡಲಾಗಿದೆ ಎಂದು ಉಲ್ಲೇಖಿಸಿದೆ. ಜೊತೆಗೆ ಎರಡನೇ ಡೋಸ್ಗೆ 2022ರ ಮಾರ್ಚ್ 5ರಿಂದ ಎಪ್ರಿಲ್ 3ರ ಒಳಗಾಗಿ ನಿಗದಿ ಪಡಿಸಿರುವಂತೆ ಉಲ್ಲೇಖವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ