ಹಬ್ಬಕ್ಕೆ ಬಂದು ಮಕ್ಕಳ ಪ್ರಾಣ ತೆಗೆದ ತಂದೆ!
ಭುಕ್ಯ ರಾಮ್ ಕುಮಾರ್ ಮೃತ ಸಿಐಎಸ್ಎಫ್ ಕಾನ್ಸ್ಟೆಬಲ್. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದನು. ಸಂಕ್ರಾಂತಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲು ಗಡಿಗುಡೆಂ ತಾಂಡಾದ ಮನೆಗೆ ಬಂದಿದ್ದನು.
ಈ ವೇಳೆ ಫೈನಾನ್ಸ್ ಕಂಪನಿಯೊಂದರಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಹೀಗೆ ಕೆಲವು ವಿಚಾರಗಳ ಕುರಿತಾಗಿ ದಂಪತಿ ನಡುವೆ ಮನಸ್ಥಾಪ ಇತ್ತು. ಮನನೊಂದ ರಾಮ್ ಕುಮಾರ್ ತನ್ನ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದಾನೆ.
ಇಬ್ಬರ ಪ್ರಾಣವನ್ನು ತೆಗೆದು ಮೃತ ದೇಹಗಳನ್ನು ಬಾವಿಗೆ ಎಸೆದು ಗ್ರಾಮಸ್ಥರಿಗೆ ಈ ವಿಚಾರವನ್ನು ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.