ಹಿಂದಿ ಭಾಷಾ ಹೇರಿಕೆಗೆ ತೀವ್ರ ವಿರೋಧ
ಕೇಂದ್ರ ಸರ್ಕಾರ ದೇಶದಲ್ಲಿ ಹಿಂದಿ ಭಾಷಾ ಹೇರಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಂವಿಧಾನದ ಪರಿಚ್ಛೇದದಲ್ಲಿನ ಎಲ್ಲಾ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ಸಿಗಬೇಕು. ನಿರಂತರ ಹಿಂದಿ ಸಪ್ತಾಹ, ಹಿಂದಿ ಭಾಷೆ ಹೆಸರಿನಲ್ಲಿ ಕನ್ನಡಿಗರ ಕಡೆಗಣನೆಯಾಗುತ್ತಿದೆ ಎ೦ದು ಪ್ರತಿಭಟನಾಕಾರರು ಆರೋಪಿಸಿ ಘೋಷಣೆ ಹಾಕಿದ್ದಾರೆ.
ಭಾರತ ಭಾಷಾ ವೈವಿಧ್ಯತೆಯನ್ನ ಗೌರವಿಸಲು ಕೇಂದ್ರ ಸರಕಾರ ಮುಂದಾಗಲಿ ಎ೦ದು ಪ್ರತಿಭಟನಾಕಾರರು ಈ ಸ೦ದಭ೯ದಲ್ಲಿ ಒತ್ತಾಯಿಸಿದ್ದಾರೆ.