ಅಮೆಝೋನ್ ವಿರುದ್ಧ ಎಫ್ ಐಆರ್ ದಾಖಲು

ಶನಿವಾರ, 18 ಮೇ 2019 (09:22 IST)
ನವದೆಹಲಿ: ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಆನ್ ಲೈನ್ ಮಾರುಕಟ್ಟೆ ಕಂಪನಿ ಅಮೆಝೋನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.


ಕಂಪನಿಯ ಯುಎಸ್ ವೆಬ್ ಸೈಟ್ ನಲ್ಲಿ ಟಾಯ್ಲೆಟ್ ಕವರ್ ಮತ್ತು ಹೊದಿಕೆಗಳಲ್ಲಿ ಹಿಂದೂ ದೇವರ ಚಿತ್ರವಿರುವ ಉತ್ಪನ್ನಗಳನ್ನು ಆನ್ ಲೈನ್ ಮಾರಾಟಕ್ಕೆ ಜಾಹೀರಾತು ನೀಡಿದ್ದಕ್ಕೆ ಹಲವು ಮಂದಿ ಸಾಮಾಜಿಕ ಜಾಲತಾಣದ ಮೂಲಕ ಅಮೆಝೋನ್ ಬಹಿಷ್ಕರಿಸಿ ಅಭಿಯಾನ ಆರಂಭಿಸಿದ್ದರು.

ಹಾಗಿದ್ದರೂ ವಿದೇಶೀ ಮೂಲದ ಈ ಕಂಪನಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ನೋಯ್ಡಾದಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ