ಪಂಚ ರಾಜ್ಯಗಳ ಚುನಾವಣೆ ಮತ ಎಣಿಕೆ ಶುರು

ಭಾನುವಾರ, 2 ಮೇ 2021 (08:57 IST)
ನವದೆಹಲಿ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ.


ಕೇರಳದಲ್ಲಿ ಆಡಳಿತಾರೂಡ ಎಲ್ ಡಿಎಫ್ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಮೈತ್ರಿಕೂಟ ಯುಡಿಎಫ್ ಗೆ 2 ಸ್ಥಾನದಲ್ಲಿ ಮುನ್ನಡೆಯಿದೆ. ಬಿಜೆಪಿ ಇನ್ನೂ ಖಾತೆ ತೆರೆದಿಲ್ಲ.

ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿಯಿದೆ. ಟಿಎಂಸಿ 69 ಸ್ಥಾನಗಳಲ್ಲಿ ಬಿಜೆಪಿ 58 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಎಡಪಕ್ಷ ಇನ್ನೂ ಖಾತೆ ತೆರೆದಿಲ್ಲ. ನಂದಿಗ್ರಾಮದಲ್ಲಿ ಸಿಎಂ ಮಮತಾ ಮುನ್ನಡೆ ಹೊಂದಿದ್ದಾರೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಡಿಎಂಕೆ 11 ಸ್ಥಾನಗಳಲ್ಲಿ ಮುನ್ನಡೆಹೊಂದಿದ್ದರೆ, ಡಿಎಂಕೆ 34 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ 5, ಬಿಜೆಪಿ 12 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಪುದುಚೇರಿಯಲ್ಲೂ ಬಿಜೆಪಿ ಹೆಚ್ಚು ಮುನ್ನಡೆಯಲ್ಲಿದೆ. 5 ಸ್ಥಾನಗಳಲ್ಲಿ ಬಿಜೆಪಿ, 1 ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ