ಪತಿಯಿಂದ ಬಲವಂತದ ಲೈಂಗಿಕ ಕ್ರಿಯೆ ಅಪರಾಧವಲ್ಲ: ಕೋರ್ಟ್ ತೀರ್ಪು

ಶುಕ್ರವಾರ, 13 ಆಗಸ್ಟ್ 2021 (10:57 IST)
ಮುಂಬೈ: ವಿವಾಹವಾದ ಮೇಲೆ ಪತ್ನಿ ಜೊತೆಗೆ ಪತಿ ಬಲವಂತದ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಲ್ಲ ಎಂದು ಮುಂಬೈನ ಸೆಷನ್ಸ್ ಕೋರ್ಟ್ ಒಂದು ತೀರ್ಪು ನೀಡಿದೆ.


ಮಹಿಳೆಯೊಬ್ಬರು ತನ್ನ ಪತಿ ಮೇಲೆ ಈ ಬಗ್ಗೆ ದೂರು ನೀಡಿದ್ದರು. ಪತಿ ತನ್ನ ಜೊತೆಗೆ ಬಲವಂತವಾಗಿ ದೈಹಿಕ ಸಂಬಂಧ ನಡೆಸಿದ ಪರಿಣಾಮ ತಾನು ಪ್ಯಾರಲಿಸಿಸ್ ಗೊಳಗಾಗಿದ್ದಾಗಿ ಮಹಿಳೆ ದೂರಿದ್ದಳು. ಅಲ್ಲದೆ, ಪತಿ ಮನೆಯವರು ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದೂ ದೂರಿದ್ದಳು. ಈ ಸಂಬಂಧ ಪತಿಯನ್ನು ಬಂಧಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಕೋರ್ಟ್ ಈ ಪ್ರಕರಣದಲ್ಲಿ ಆಕೆ ಹೇಳಿದಂತೆ ವರದಕ್ಷಿಣೆ ಕಿರುಕುಳಕ್ಕೆ ಸೂಕ್ತ ಸಾಕ್ಷ್ಯಾಧಾರವಿಲ್ಲ. ಅಲ್ಲದೆ, ಮದುವೆ ಬಳಿಕ ಸೆಕ್ಸ್ ಅಪರಾಧವಲ್ಲ. ಇದರಿಂದಾಗಿ ಆರೋಪಿಗೆ ಜಾಮೀನು ಮಂಜೂರು ಮಾಡಿರುವುದಾಗಿ ಕೋರ್ಟ್ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ