ದಾಂಪತ್ಯ ಸರಿಹೋಗಲು ಬೆತ್ತಲೆ ಸೇವೆಗೆ ಒತ್ತಾಯ: ಪತಿ ಸೇರಿ ಇಬ್ಬರ ಬಂಧನ

Sampriya

ಬುಧವಾರ, 18 ಸೆಪ್ಟಂಬರ್ 2024 (17:46 IST)
ಕೇರಳ: ಮಹಿಳೆಯೊಬ್ಬರನ್ನು ಬೆತ್ತಲೆ ಸೇವೆ ಮಾಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದಲ್ಲಿ ಸಂತ್ರಸ್ತೆಯ ಪತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ 46 ವರ್ಷದ ಪ್ರಕಾಶ್ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ: ನನ್ನ ಗಂಡನ ದೇಹದಲ್ಲಿ ದುಷ್ಟಶಕ್ತಿ ನೆಲೆಸಿದ್ದರಿಂದ ದಾಂಪತ್ಯ ಜೀವನಕ್ಕೆ ತೊಂದರೆಯಾಗುತ್ತಿದೆ. ಜೀವನದಲ್ಲಿ ಎಲ್ಲ ಸರಿಹೋಗಬೇಕಾದರೆ  ಬೆತ್ತಲೆ ಸೇವೆ ಮಾಡಬೇಕೆಂದು  ಪ್ರಕಾಶ್ ಹೇಳಿದ್ದರು.  

ಇದರಿಂದ ನನಗೆ  ಬೆತ್ತಲೆ ಸೇವೆ ಮಾಡುವಂತೆ ಪ್ರಕಾಶ್ ಮತ್ತು ನನ್ನ ಪತಿ ನಿತ್ಯ ಕಿರುಕುಳ ನೀಡುತ್ತಿದ್ದರು. ಇದೀಗ ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ