ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತೆ 14 ವರ್ಷ ಜೈಲು

geetha

ಬುಧವಾರ, 31 ಜನವರಿ 2024 (18:33 IST)
ಇಸ್ಲಾಮಾಬಾದ್‌ : ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶರು ಇಮ್ರಾನ್‌ ಖಾನ್ ಪ್ರಕರಣವನ್ನು ವಿಚಾರಣೆಗೊಳಪಡಿಸಿ ತೀರ್ಪು ಪ್ರಕಟಿಸಿದ್ದಾರೆ. ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ದಳದ ಎನ್‌ಎಇಬಿ ಇಮ್ರಾನ್ ದಂಪತಿಗಳ ವಿರುದ್ದ ಪ್ರಕರಣ ದಾಖಲಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮತ್ತು ಪಕ್ಷದ ಚಿಹ್ನೆ ಅಧಿಕೃತ ಸ್ಥಾನಗಳು ರದ್ದಾಗುವ ನಿರೀಕ್ಷೆಯಿದ್ದು, ಆತಂಕದಲ್ಲಿರುವ ಇಮ್ರಾನ್‌ ಖಾನ್‌ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ.
 
ಸೈಫರ್‌ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಪಡೆದಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತೋಷಖಾನಾ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಮತ್ತು ಆತನ ಪತ್ನಿ ಬೂಶ್ರಾ ಬೀಬಿಗೆ 14 ವರ್ಷ ಶಿಕ್ಷೆ ಹಾಗೂ 7.87 ಕೋಟಿ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ