ಈ ಫೋನ್ ಗಳಲ್ಲಿ ಜೂನ್ 30 ರಿಂದ ವಾಟ್ಸಪ್ ಸ್ಥಗಿತಗೊಳ್ಳಲಿದೆ!

ಮಂಗಳವಾರ, 13 ಜೂನ್ 2017 (10:07 IST)
ನವದೆಹಲಿ: ವಾಟ್ಸಪ್ ಮೆಸೇಜ್ ಮಾಡಿಕೊಂಡು ಹಾಯಾಗಿದ್ದಿರಾ? ಹಾಗಿದ್ದರೆ ನಿಮ್ಮ ಫೋನ್ ಯಾವುದೆಂದು ಚೆಕ್ ಮಾಡಿಕೊಳ್ಳಿ. ಯಾಕೆಂದರೆ ಕೆಲವು ಫೋನ್ ಗಳಲ್ಲಿ ಜೂನ್ 30 ರಿಂದ ವಾಟ್ಸಪ್ ಸ್ಥಗಿತಗೊಳ್ಳಲಿದೆ.

 
ಬ್ಲ್ಯಾಕ್ ಬೆರಿ ಒಎಸ್ ಮತ್ತು ಒ10, ನೋಕಿಯಾ ಎಸ್40 ಮತ್ತು ನೋಕಿಯಾ ಸಿಂಬಿಯಾನ್ ಎಸ್ 60 ಫೋನ್ ಸೆಟ್ ಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತಗೊಳ್ಳಲಿದೆ.  ಈ ಫೋನ್ ಗಳಲ್ಲಿ ವಾಟ್ಸಪ್ ಹೊಸದಾಗಿ ಹೊರತರಲು ಉದ್ದೇಶಿಸಿರುವ ಹೊಸ ಫೀಚರ್ ಗಳನ್ನು ನೀಡುವ ಕೆಪಾಸಿಟಿ ಇಲ್ಲ ಎಂಬ ಕಾರಣಕ್ಕೆ ಸೇವೆ ಬಂದ್ ಆಗಲಿದೆ ಎಂದು ವಾಟ್ಸಪ್ ಪ್ರಕಟಿಸಿದೆ.

ಒಂದು ನಂಬರ್ ನಿಂದ ಒಂದೇ ಬಾರಿ ವಾಟ್ಸಪ್ ಆಕ್ಟಿವೇಟ್ ಮಾಡಲು ಸಾಧ್ಯ. ಹಾಗಾಗಿ ಹೊಸ ಮೊಬೈಲ್ ಸೆಟ್ ಗೆ ವಾಟ್ಸಪ್ ಅಳವಡಿಸಿಕೊಳ್ಳಲು ಬಯಸುವವರು ಹೊಸ ಸೆಟ್ ಗೆ ವಾಟ್ಸಪ್ ಡೌನ್ ಲೋಡ್ ಮಾಡಿಕೊಂಡು ಫೋನ್ ನಂಬರ್ ವೆರಿಫೈ ಮಾಡಿಕೊಳ್ಳಬೇಕು ಎಂದು ವಾಟ್ಸಪ್ ಪ್ರಕಟಣೆ ತಿಳಿಸಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ