ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇ ಬೇಕೆನಿಸುತ್ತಿಲ್ಲ. ಕಾರಣವಲ್ಲದ ಕಾರಣಕ್ಕೆ ಜೀವನಕ್ಕೆ ಇತಿಶ್ರೀ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕೆ ವಯಸ್ಸಿನ ಭೇದವಿಲ್ಲ. ಸಾವು ಏನೆಂದು ತಿಳಿಯದ ಏಳೆಂಟು ವರ್ಷದ ಮಕ್ಕಳಿಂದ ಹಿಡಿದು 90 ವರ್ಷ ದಾಟಿದ ವೃದ್ಧರು ಸಹ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಅಂತವರ ಸಾಲಲ್ಲಿ ಈ 30 ವರ್ಷದ ಮಹಿಳೆಯೂ ಸೇರುತ್ತಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಗೊತ್ತೇ? ತಿಳಿಯಲು ಮುಂದೆ ಓದಿ.
ಲಂಡನ್‌ನಲ್ಲಿ ಎಂಬಿಎ ಮುಗಿಸಿ ಬಂದಿದ್ದ ಜಸ್ಕಮಲ್ ಸೇಹಗಲ್‌ಗೆ ತಾನು 4 ಅಡಿ ಎತ್ತರವಿದ್ದೇನೆಂಬುದು ಖಿನ್ನತೆಗೆ ದೂಡಿತ್ತು. ಕಡಿಮೆ ಎತ್ತರ ತನ್ನ ಮದುವೆಗೂ ತೊಡಕಾಗಿದೆ ಎಂಬುದು ಅವಳ ಚಿಂತೆಯಾಗಿತ್ತು. ಅನೇಕ ವರ್ಷಗಳಿಂದ ಈ ಚಿಂತೆಯಲ್ಲಿಯೇ ಬೇಯುತ್ತಿದ್ದ ಆಕೆ ಮಂಗಳವಾರ ತಾನು ವಾಸವಾಗಿದ್ದ ಪೋವಾಯ್ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ.