ಪಾಕಿಸ್ತಾನ ಸರ್ಕಾರ ರಚಿಸಲು ಹರಸಾಹಸ!

geetha

ಸೋಮವಾರ, 12 ಫೆಬ್ರವರಿ 2024 (18:00 IST)
ಪಾಕಿಸ್ತಾನ : ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಹಲವು ಪಕ್ಷಗಳು ದನಿಯೆತ್ತಿದ್ದರೆ, ಮತ್ತೂ ಕೆಲವು ಪಕ್ಷಗಳು ರಾಷ್ಟ್ರಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಮಾಜಿ ಪ್ರಧಾನಿ  ಹಾಗೂ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ವರಿಷ್ಠ ನವಾಜ್‌ ಷರೀಫ್‌ ಅವರಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಡಬೇಕೆಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ. ಅಸೀಮ್‌ ಮುನಿರ್‌ ಕರೆ ನೀಡಿದ್ದಾರೆ.  ಈ ನಡುವೆ ಜೈಲು ವಾಸಿಯಾಗಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಕ್ಕೆ ನಿಂತಿರುವ ನೂರಕ್ಕೂ ಹೆಚ್ಚು ಸ್ವತಂತ್ರ್ಯ ಅಭ್ಯರ್ಥಿಗಳು ಪಾಕಿಸ್ತಾನ್‌ ತೆಹ್ರಿಕ್‌ ಎ ಇನ್ಸಾಫ್ (‌PTI) ಪಕ್ಷ ಸರ್ಕಾರ ರಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. 

ಫೆ. 8 ರಂದು ನಡೆದ ಚುನಾವಣೆಯಲ್ಲಿ ಮತದಾರ ಯಾವುದೆ ಒಂದು ಪಕ್ಷಕ್ಕೆ ಬಹುಮತ ನೀಡದ ಕಾರಣ ಪಾಕಿಸ್ತಾನದಲ್ಲಿ ಅತಂತ್ರ ಸ್ಥಿತ ಯಥಾಪ್ರಕಾರ ಮುಂದುವರೆದಿದೆ. ದೇಶದ ಪ್ರಮುಖ ಮೂರು ಪಕ್ಷಗಳು ಇನ್ನೂ ಹೊಂದಾಣಿಕೆಯ ಲೆಕ್ಕಾಚಾರದಲ್ಲಿಯೇ ಮುಳುಗಿದೆ.ಮತ್ತೊಂದು ಪ್ರಮುಖ ಪಕ್ಷವಾದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (PPP) ಪಕ್ಷವು ಬಿಲಾವಲ್‌ ಜರ್ದಾರಿ ಭುಟ್ಟೋ ನೇತೃತ್ವದಲ್ಲಿ 54 ಸ್ಥಾನಗಳನ್ನು ಗಳಿಸಿದ್ದು, ಕರಾಚಿ ಮೂಲದ, ಭಾರತೀಯ ಮೂಲದ ಉರ್ದು ಭಾಷಿಕರ ಪಕ್ಷವಾದ ಮುತ್ತಹಿದಾ ಕ್ವಾಮಿ ಮೂವ್‌ ಮೆಂಟ್‌ ಪಾಕಿಸ್ತಾನ MQM-P) ಪಕ್ಷವು 17 ಸ್ಥಾನ ಗಳಿಸಿದೆ.  ಈಗಾಗಲೆ ಪಿಎಂಎಲ್‌-ಎನ್‌ ನಾಯಕರು ಎಂಕ್ಯುಎಂ-ಪಿ ಮತ್ತಿತರ ಸಣ್ಣಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಇನ್ನೆರೆಡು ದಿನಗಳಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆಗಳಿವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ