ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿಗೆ ಬೆಂಕಿ ಹಚ್ಚಿ ಕೊಂದ ಅಪ್ರಾಪ್ತ ಹುಡುಗ

ಶನಿವಾರ, 3 ಫೆಬ್ರವರಿ 2018 (16:29 IST)
ರಾಜಸ್ತಾನ: ಅಪ್ರಾಪ್ತ ವಯಸ್ಸಿನ ಹುಡುಗನೋರ್ವ ಪ್ರೌಢಶಾಲೆಯಲ್ಲಿ ಓದುತ್ತಿರುವ ಬಾಲಕಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ.


16 ವರ್ಷದ ಆರೋಪಿ ಯುವಕ 14 ವರ್ಷದ ಬಾಲಕಿಯ ಮುಂದೆ ಇತ್ತೀಚಿಗೆ ಪ್ರೀತಿಸುವುದಾಗಿ ಹೇಳಿದ್ದ. ಇದನ್ನು ವಿರೋಧಿಸಿದ ಬಾಲಕಿ ತನ್ನ ಪೋಷಕರ ಬಳಿ ಈ ವಿಷಯದ ಕುರಿತು ಹೇಳಿದ್ದಳು. ಆಕೆಯ ಪೋಷಕರು ಯುವಕನಿಗೆ ಎಚ್ಚರಿಕೆ ನೀಡಿದ್ದರು.  


ಇದರಿಂದ ಸಿಟ್ಟುಗೊಂಡ ಯುವಕ ಬಾಲಕಿಯೊಬ್ಬಳೆ ಮನೆಯೊಳಗೆ ಇರುವುದನ್ನು ನೋಡಿ ಅಲ್ಲಿಗೆ ಬಂದಿದ್ದಾನೆ. ವಿಷಯವನ್ನು ತಂದೆ-ತಾಯಿ ಬಳಿ ಹೇಳಿದ್ದಕ್ಕೆ ಕೋಪಗೊಂಡಿದ್ದ. ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ. ಸಿಟ್ಟಿನಲ್ಲಿದ್ದ ಯುವಕ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಆಕೆಯ ಕಿರುಚಾಟವನ್ನು ಕೇಳಿ ಓಡಿ ಬಂದ ನೆರೆಹೊರೆಯವರು ಬೆಂಕಿ ನಂದಿಸಿ, ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ