ಸೇನೆಯಲ್ಲಿ ಮುಸ್ಲಿಮರಿಗೆ ಶೇ.30 ಮೀಸಲಾತಿ ಕೊಡಿ : ಜೆಡಿಯು

ಬುಧವಾರ, 15 ಫೆಬ್ರವರಿ 2023 (11:25 IST)
ರಾಂಚಿ : ಸೇನೆಯಲ್ಲಿ ಮುಸ್ಲಿಮರಿಗೆ (ಸಶಸ್ತ್ರ ಪಡೆ) ಶೇ.30 ರಷ್ಟು ಮೀಸಲಾತಿ ನೀಡಬೇಕು ಎಂದು ಜನತಾ ದಳ (ಯುನೈಟೆಡ್) ಮುಖಂಡ ಗುಲಾಮ್ ರಸೂಲ್ ಬಲ್ಯಾವಿ ಒತ್ತಾಯಿಸಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಕ್ಷವು ತನ್ನ ಅಪರಾಧಗಳನ್ನು ಮುಚ್ಚಿಡಲು ಸೇನೆಯ ಹಿಂದೆ ಅಡಗಿದೆ. ಸೈನಿಕರ ಶೌರ್ಯ ಮತ್ತು ಧೈರ್ಯದ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಸೇನೆಯ ಹಿಂದೆ ಅಡಗಿಕೊಂಡಿದೆ. ಬಿಜೆಪಿಯವರು ಮತಕ್ಕಾಗಿ ಸೈನಿಕರ ರಕ್ತದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರು ನಮ್ಮ ಪಡೆಗಳ ತ್ಯಾಗ, ಶೌರ್ಯ ಮತ್ತು ಹುತಾತ್ಮರ ಲಾಭವನ್ನು ಪಡೆದುಕೊಂಡಿದ್ದಾರೆ.

ಸೇನೆಯ ಮೇಲೆ ನಮಗೆ ನಂಬಿಕೆ ಇದೆ. ಸಶಸ್ತ್ರ ಪಡೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 30 ರಷ್ಟು ಮೀಸಲಾತಿ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ