ಗೂಗಲ್ ಮ್ಯಾಪ್ ಫದೀತಿ?!

ಶುಕ್ರವಾರ, 11 ಫೆಬ್ರವರಿ 2022 (15:17 IST)
ತಿರುವನಂತಪುರಂ : ಗೂಗಲ್ ಮ್ಯಾಪ್ ಆಧಾರದ ಮೇಲೆ ನಾವು ಕೆಲವು ಸ್ಥಳ ಇರುವ ಜಾಗವನ್ನು ಪತ್ತೆ ಮಾಡಿ ಹೋಗುತ್ತೇವೆ.

ಆದರೆ ಹೀಗೆ ಗೂಗಲ್ ಮ್ಯಾಪ್ ಬಳಸುತ್ತಾ ಕಾರ್ ಚಾಲಕ 3 ಮಂದಿಯ ಸಾವಿಗೆ ಕಾರಣನಾಗಿದ್ದಾನೆ.
ಶ್ರೀಜಾ(45), ಶಕುಂತಲಾ(51), ಇಂದಿರಾ(57) ಮೃತರಾಗಿದ್ದಾರೆ. ಗೂಗಲ್ ಮ್ಯಾಪ್ ಬಳಸಿ ಕಾರ್ ಚಾಲನೆ ಮಾಡುತ್ತಿದ್ದ. ಚಾಲಕನ ನಿಯಂತ್ರಣ ತಪ್ಪಿ ಕಾಲುವೆ ಬಿದ್ದು ಮೂವರು ಮೃತಪಟ್ಟಿದ್ದಾರೆ.

7 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕಾರೊಂದು ಕೇರಳದ ಅಡೂರ್ ಬೈಪಾಸ್ ಬಳಿ ಕಾಲುವೆಗೆ ಬಿದ್ದು, ಮೂವರು ಮೃತಪಟ್ಟಿದ್ದಾರೆ. ಕಾರ್ ಚಾಲಕನಿಗೆ ಹೋಗುತ್ತಿದ್ದ ದಾರಿಯ ಪರಿಚಯವಿರಲಿಲ್ಲ. ಹೀಗಾಗಿ ಆತ ಗೂಗಲ್ ಮ್ಯಾಪ್ ಬಳಸುತ್ತಿದ್ದನು.

ಮ್ಯಾಪ್ ತೋರಿದ ದಾರಿಯನ್ನೇ ಅನುಸರಿಸುತ್ತಾ ಕಾರ್ ಚಾಲನೆ ಮಾಡುತ್ತಿದ್ದ. ಚಾಲಕ ದಾರಿ ತಪ್ಪಿತ್ತು ಎಂದು ತಿಳಿದಾಗ ಗಾಬರಿಗೊಂಡು ಕಾರನ್ನ ಕಾಲುವೆಗೆ ಇಳಿಸಿದ್ದಾನೆ.

ಕಾಲುವೆಯಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದ ಕಾರಣ ಕಾರು ಕೊಚ್ಚಿ ಹೋಗಿ ಸಂಪೂರ್ಣವಾಗಿ ಮುಳುಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಡನೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ್ದು, ಉಳಿದ ಮೂವರು ಸ್ಥಳದಲ್ಲೇ ಕೊನೆಯುಸಿರೆಳದಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ