ತಾಯಿ ಮೇಲೆ ಹಲ್ಲೆ ಮಾಡಿದ ಸಂಬಂಧಿಯನ್ನು ಹೆಣ್ಣು ಮಕ್ಕಳು ಏನ್ ಮಾಡುದ್ರು ನೋಡಿ!
ಮಹಮ್ಮದ್ ಕೋಯಾ (70) ಮೃತ ದುರ್ದೈವಿ. ತಮ್ಮ ತಾಯಿಗೆ ಹೊಡೆಯಲು ಬಂದಾಗ ಬಾಲಕಿಯರು ಮೊದಲಿಗೆ ತಡೆಯಲು ಮುಂದಾಗಿದ್ದಾರೆ.
ತಡೆಯಲು ಎಷ್ಟೇ ಪ್ರಯತ್ನಿಸಿದರೂ ವ್ಯಕ್ತಿ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಹುಡುಗಿಯರು ಕೋಯಾನನ್ನು ಕೊಡಲಿಯಿಂದ ಹೊಡೆದು ಕೊಂದು ಶವವನ್ನು ಬಾವಿಗೆ ಎಸೆದಿದ್ದಾರೆ.
ಘಟನೆಯ ಬಳಿಕ ಬಾಲಕಿಯರು ವ್ಯಕ್ತಿಯನ್ನು ಕೊಂದಿರುವುದಾಗಿ ಪೊಲೀಸರ ಬಳಿ ಶರಣಾಗಿದ್ದಾರೆ. ನಂತರ ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.