ಭಾರತದಲ್ಲಿ ಜಾರಿಗೆ ಬರಲಿದೆಯೇ 2 ರೀತಿ ಟೈಮ್ ಝೋನ್...?

ಶುಕ್ರವಾರ, 23 ಜೂನ್ 2017 (12:55 IST)
ನವದೆಹಲಿ: ಈಶಾನ್ಯ ರಾಜ್ಯಗಳಿಗೇ ಪ್ರತ್ಯೇಕವಾದ ಟೈಂ ಝೋನ್ ನೀಡುವ ಬಗ್ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಈಗಿರುವ ಟೈಂ ಝೋನ್ ಗೆ ಹೊಂದಿಕೊಳ್ಳಲು ಭಾರತದ ಹಲವು ರಾಜ್ಯಗಳಿಗೆ ಸಮಸ್ಯೆಯಾಗಿದೆ ಎಂಬ ಕಾರಣಕ್ಕಾಗಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ.
 
ಭಾರತದ ಈಶಾನ್ಯ ರಾಜ್ಯಗಳಲ್ಲಿ ಸುರ್ಯೋದಯ ಬೇಗನೆ ಆಗುತ್ತದೆ. ಹಾಗೂ ಸೂರ್ಯಾಸ್ತವೂ ಬೇಗನೆ ಆಗುವುದರಿಂದ ಈ ರಾಜ್ಯಗಳಿಗೆ ಈಗಿರುವ ಟೈಮ್ ಝೋನ್ ಗೆ ಹೊಂದಿಕೊಳ್ಳುವುದು ಕಷ್ಟಕರವಾಗಿದೆ. ಕಾರಣ ಭಾರತದ ಉಳಿದ ಸಮಯದಂತೆಯೇ ಇಲ್ಲೂ ಕಚೇರಿ, ಶಾಲೆ ಎಲ್ಲವೂ ಆರಂಭವಾ ಗುತ್ತವೆ. ಹೀಗಾಗಿ ಅವರು ಮಧ್ಯಾಹ್ನ ಶಾಲೆ ಅಥವಾ ಕಚೇರಿಗೆ ಬಂದು, ತಡರಾತ್ರಿ ಮನೆಗೆ ಹೋದಂತೆ ಆಗುತ್ತದೆ. ಸೂರ್ಯ ಮುಳು ಗಿದ ಮೇಲೂ ಕಚೇರಿ, ಶಾಲಾ ಕಾಲೇಜುಗಳು ಸೇರಿ ಇನ್ನಿತರೆ ಚಟುವಟಿಕೆಗಳು ಇರುವುದ ರಿಂದ ವಿದ್ಯುತ್‌ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಶಾನ್ಯ ರಾಜ್ಯಗಳಿಗೇ ಬೇರೊಂದು ಟೈಮ್‌ ಝೋನ್‌ ಕೊಟ್ಟರೆ ಸಮಯ, ವಿದ್ಯುತ್‌ ಉಳಿತಾಯವಾಗುತ್ತದೆ ಎಂದು ಈ ರಾಜ್ಯಗಳ ನಾಯಕರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
 
ಇನ್ನು ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು, ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಟೈಮ್‌ ಝೋನ್‌ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶುತೋಶ್‌ ಶರ್ಮಾ ತಿಳಿಸಿದ್ದಾರೆ.  ಹೀಗಾಗಿ ಭಾರತದಲ್ಲಿ ಇನ್ನುಮುಂದೆ ಎರಡು ರೀತಿ ಟೈಮ್ ಝೋನ್ ಜಾರಿಗೆ ಬರುವ ಸಾಧ್ಯತೆಯಿದೆ.
 

ವೆಬ್ದುನಿಯಾವನ್ನು ಓದಿ