ಕೊರೊನಾ ಭೀತಿ ಹಿನ್ನಲೆ ರಾಜ್ಯಗಳಿಗೆ ಅನುದಾನ ಹಂಚಿಕೆ; ಕರ್ನಾಟಕದ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ
ಶನಿವಾರ, 4 ಏಪ್ರಿಲ್ 2020 (07:27 IST)
ನವದೆಹಲಿ : ಕೊರೊನಾ ಭೀತಿ ಹಿನ್ನಲೆ ರಾಜ್ಯಗಳಿಗೆ ಅನುದಾನ ನೀಡುವ ನಿಟ್ಟಿನಲ್ಲಿ ಈಗ ಮತ್ತೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎನ್ನಲಾಗಿದೆ.
ಕೊರೊನಾದಿಂದ ತತ್ತರಿಸುತ್ತಿರುವ ರಾಜ್ಯಗಳಿಗೆ ಅನುದಾನ ನೀಡಲು ಕೇಂದ್ರ ಹಣಕಾಸು ಇಲಾಖೆ ಮೊದಲ ಕಂತಿನ ಹಣವಾಗಿ 17,287.08ಕೋಟಿ ಬಿಡುಗಡೆ ಮಾಡಿದೆ. ಇದನ್ನು 14 ರಾಜ್ಯಗಳಿಗೆ ಈ ಹಣ ಹಂಚಿಕೆ ಮಾಡಿದ್ದು, ಅದರಲ್ಲಿ ಕರ್ನಾಟಕದ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ಆಂಧ್ರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಪಶ್ವಿಮ ಬಂಗಾಳ ಅನುದಾನ ನೀಡಿದೆ. ಆದರೆ ಈ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಉಲ್ಲೇಖಿಸಿಲ್ಲ ಎನ್ನಲಾಗಿದೆ.