ಗುಜರಾತಿನ ಅಹಮದಾಬಾದ್ ಜಿಲ್ಲೆಯ ಧೋಲ್ಕಾ- ಬಗೋದರಾ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಕನಿಷ್ಠ 14 ಜನರು ದುರ್ಮರಣವನ್ನಪ್ಪಿದ್ದಾರೆ. ಘಟನೆಯಲ್ಲಿ ಅನೇಕ ಜನರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಪಿಕ್ ಅಪ್ ವ್ಯಾನ್ ಮತ್ತು ಟ್ರಕ್ ನಡುವೆ ನಡೆದ ಡಿಕ್ಕಿಯಿಂದ ಈ ಅನಾಹುತ ನಡೆದಿದ್ದು ಗಾಯಾಳುಗಳನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಎರಡು ವಾಹನಗಳ ಅತಿಯಾದ ವೇಗ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಮೃತರು ಮತ್ತು ಗಾಯಾಳುಗಳು ರಾಜ್ಕೋಟ್ ಜಿಲ್ಲಯ ಸೊಖ್ಡಾ ಗ್ರಾಮದ ನಿವಾಸಿಗಳಾಗಿದ್ದಾರೆ. ಒಟ್ಟು 5 ಕುಟುಂಬದ ಸದಸ್ಯರು ವ್ಯಾನ್‌ನಲ್ಲಿ ಪ್ರಸಿದ್ಧ ತೀರ್ಥಯಾತ್ರೆ ಗಿರಿಧಾಮ ಪಾವಗದ್‌ನಿಂದ ಹಿಂತಿರುಗುತ್ತಿದ್ದರೆಂದು ತಿಳಿದು ಬಂದಿದೆ.
ಮೃತರಲ್ಲಿ 9 ಜನ ಒಂದೇ ಕುಟುಂಬದವರಾಗಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಹಿರಿಯ ಕ್ಯಾಬಿನೇಟ್ ಸಚಿವ, ದೋಲ್ಕಾ ಶಾಸಕ ಭುಪೇಂದ್ರಸಿಂಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ