ಪ್ರಧಾನಿ ಮೋದಿ ಪದವಿ ಪ್ರಕರಣ ತನಿಖೆಗೆ ಗುಜರಾತ್ ಹೈಕೋರ್ಟ್ ಆದೇಶ: ಬಿಜೆಪಿಗೆ ಆಘಾತ

ಗುರುವಾರ, 29 ಡಿಸೆಂಬರ್ 2016 (13:44 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಶೈಕ್ಷಣಿಕ ಪದವಿ ಮಾಹಿತಿ ಕೋರಿ ಗುಜರಾತ್ ವಿಶ್ವವಿದ್ಯಾಲಯ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಮೋದಿಯ ಶೈಕ್ಷಣಿಕ ಅರ್ಹತೆ ಪ್ರಕರಣವನ್ನು ಏಕಪೀಠದಿಂದ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.  
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಪ್ರಧಾನಿ ಮೋದಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಮಾಹಿತಿ ಆಯೋಗ ಗುಜರಾತ್ ವಿಶ್ವವಿದ್ಯಾಲಯಕ್ಕೆ ಆದೇಶ ಜಾರಿಗೊಳಿಸಿ ಕೂಡಲೇ ಪ್ರಧಾನಿ ಮೋದಿಯ ಶೈಕ್ಷಣಿಕ ವಿವರ ನೀಡುವಂತೆ ಕೋರಿತ್ತು. 
 
ಗುಜರಾತ್ ವಿಶ್ವವಿದ್ಯಾಲಯ ಹೈಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಿ ಕೇಂದ್ರ ಮಾಹಿತಿ ಆಯೋಗ ನೀಡಿದ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿತ್ತು, ಆದರೆ, ಗುಜರಾತ್ ವಿಶ್ವವಿದ್ಯಾಲಯದ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ಏಕಪೀಠದಿಂದ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.
 
ಗುಜರಾತ್‌ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಆರ್.ಸುಭಾಷ್ ರೆಡ್ಡಿ ಮತ್ತು ನ್ಯಾಯಮೂರ್ತಿ ವಿ.ಎಂ.ಪಾಂಚೋಲಿ ಗುಜರಾತ್ ವಿಶ್ವವಿದ್ಯಾಲಯದ ಅರ್ಜಿ ತಿರಸ್ಕರಿಸಿರುವುದು ಪ್ರಧಾನಿ ಮೋದಿಗೆ ತೀವ್ರ ಹಿನ್ನೆಡೆಯಾದಂತಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ