ಗುಜರಾತ್ ಕಾಂಗ್ರೆಸ್ ಘಟಕಕ್ಕೆಆಪರಷೇನ್ ಕಮಲದ ಭೀತಿ ಆರಂಭವಾಗಿದ್ದು, ತನ್ನೆಲ್ಲಾ ಶಾಸಕರನ್ನು ಬೆಂಗಳೂರಿಗೆ ರವಾನೆ ಮಾಡಿದೆ. ಬೆಂಗಳೂರಿನ ರಾಮನಗರದಲ್ಲಿರುವ ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕರನ್ನು ಇರಿಸಲಾಗಿದೆ. ಈ ಮಧ್ಯೆ ತಮ್ಮ ಶಾಸಕರಿಗೆ ರಕ್ಷಣೆ ಇಲ್ಲ. ಆಮಿಷಗಳನ್ನು, ಬೆದರಿಕೆ ಒಡ್ಡಿ ಅವರನ್ನು ಪಕ್ಷದಿಂದ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗುಜರಾತ್ ಕಾಂಗ್ರೆಸ್ ಘಟಕದ ಮುಖಂಡರು ಆಯೋಗಕ್ಕೆ ಮನವಿ ಮಾಡಿದ್ದಾರೆ.