ವ್ಯಾಟ್ಸಪ್ ನ ಈ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!

ಗುರುವಾರ, 4 ಜೂನ್ 2020 (08:59 IST)
ಬೆಂಗಳೂರು: ಲಾಕ್ ಡೌನ್ ವೇಳೆ ಸೈಬರ್ ಕ್ರೈಂ ಹೆಚ್ಚಾಗಿದೆ ಎಂದು ಸ್ವತಃ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದರು. ಅದರಂತೆ ಇತ್ತೀಚೆಗೆ ಕೆಲವು ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುತ್ತಿರುವ ಸುದ್ದಿ ಬಹಳವಾಗಿ ಕೇಳಿಬರುತ್ತಿದೆ.

 

ನಾವು ಹೆಚ್ಚು ಬಳಕೆ ಮಾಡುವ ಮೀಡಿಯಾದಲ್ಲಿ ವ್ಯಾಟ್ಸಪ್ ಕೂಡಾ ಒಂದು. ವ್ಯಾಟ್ಸಪ್ ಮೇಲೂ ಹ್ಯಾಕರ್ ಗಳ ಕಣ್ಣು ಬಿದ್ದಿದ್ದು, ನಿಮ್ಮ ಖಾತೆಯನ್ನು ಹೈಜಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ.

ನಾವು ವ್ಯಾಟ್ಸಪ್ ತಾಂತ್ರಿಕ ತಂಡದವರು ಎಂದು ಹೇಳಿಕೊಂಡು ಅಪರಿಚಿತರು ನೀವು ವ್ಯಾಟ್ಸಪ್ ಖಾತೆ ತೆರೆದಾಗ ನೀಡಲಾದ 6 ಡಿಜಿಟ್ ಗಳ ವೆರಿಫಿಕೇಷನ್ ಸಂಖ್ಯೆ ಒದಗಿಸಲು ಕೇಳುತ್ತಿದ್ದಾರೆ. ಇದನ್ನು ನೀಡಿದ ಕೂಡಲೇ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ. ಈ ಬಗ್ಗೆ ವ್ಯಾಟ್ಸಪ್ ಕೂಡಾ ಎಚ್ಚರಿಕೆ ಸಂದೇಶ ನೀಡಿದ್ದು, ನಾವು ಬಳಕೆದಾರರಲ್ಲಿ ಅಂತಹ ಯಾವುದೇ ಮಾಹಿತಿ ಕೇಳುತ್ತಿಲ್ಲ. ಇದರ ಬಗ್ಗೆ ಎಚ್ಚರವಾಗಿರಿ ಎಂದು ಪ್ರಕಟಣೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ