ಡೇರಾ ಸಚ್ಚಾ ಸೌಧ ಆಶ್ರಮವನ್ನ ವಶಕ್ಕೆ ಪಡೆದ ಸೇನೆ

ಶನಿವಾರ, 26 ಆಗಸ್ಟ್ 2017 (12:15 IST)
ಹರ್ಯಾಣದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್`ಗೆ ಶಿಕ್ಷೆಯಾದ ಬಳಿಕ ಡೇರಾ ಆಶ್ರಮವನ್ನ ಸೇನೆ ವಶಕ್ಕೆ ಪಡೆದುಕೊಂಡಿದೆ.

4 ಸೇನಾ ತುಕಡಿಗಳು ಡೇರಾ ಸಚ್ಚಾ ಸೌಧವನ್ನ ಸುತ್ತುವರೆದಿದ್ದು, ಆಶ್ರಮದಲ್ಲಿದ್ದ ಭಕ್ತರು, ರಾಮ್ ರಹೀಮ್ ಅನುಯಾಯಿಗಳು, ಆಡಳಿತ ಸಿಬ್ಬಂದಿಯನ್ನ ಹೊರಗೆ ಕಳುಹಿಸಲಾಗುತ್ತಿದೆ. ನಿನ್ನೆ ರಾಮ್ ರಹೀಮ್`ಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾದ ಬಳಿಕ ಹರ್ಯಾಣದಲ್ಲಿ ಡೇರಾ ಗೂಂಡಾಗಳು ಹಿಂಸಾಚಾರ ನಡೆಸಿದ್ದರು. ಗೂಂಡಾಗಳಿಗೆ ಹಿಂಸಾಚಾರ ನಡೆಸಲು ಡೇರಾ ಆಶ್ರಮದಿಂದಲೇ ಸೂಚನೆ ಬರುತ್ತಿತ್ತು ಎಂಬ ಪೊಲೀಸ್ ಮಾಹಿತಿ ಆಧಾರದ ಮೇಲೆ ಆಶ್ರಮವನ್ನ ವಶಕ್ಕೆ ಪಡೆಯಲಾಗಿದೆ.

ಈ ಮಧ್ಯೆ, ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಅವರಿಗೆ ತರಾಟೆ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಿಎಂ ಕಟ್ಟರ್ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ