ಗಾಂಧಿಗಿಂತ ಮೋದಿ ಹೆಸರು ದೊಡ್ಡದು: ಹೇಳಿಕೆ ವಾಪಸ್ ಪಡೆದ ವಿಜ್

ಶನಿವಾರ, 14 ಜನವರಿ 2017 (17:51 IST)
ಮಹಾತ್ಮಾ ಗಾಂಧಿ ಅವರಿಗಿಂತ ನರೇಂದ್ರ  ಮೋದಿ ಬ್ರ್ಯಾಂಡ್ ನೇಮ್ ದೊಡ್ಡದು ಎಂದು ಹೇಳಿ ಬಹುದೊಡ್ಡ ವಿವಾದವನ್ನು ಹುಟ್ಟಿಹಾಕಿದ್ದ ಹರಿಯಾಣದ ಬಿಜೆಪಿ ಅನಿಲ್ ವಿಜ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. 

ಈ ಹೇಳಿಕೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಹರಿಯಾಣಾದ ಕ್ರೀಡಾ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ತಮ್ಮ ಮಾತನ್ನು ಹಿಂಪಡೆದಿದ್ದಾರೆ. ಗಾಂಧಿ ಕುರಿತು ನನ್ನ ಹೇಳಿಕೆ ವೈಯಕ್ತಿಕ ಅಭಿಪ್ರಾಯ, ಹೊರತು ಬಿಜೆಪಿ ಪಕ್ಷದ್ದಲ್ಲ. ಯಾರ ಭಾವನೆಗಳಿಗೂ ನೋವುಂಟಾಗಬಾರದೆಂದು ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ, ಎಂದು ವಿಜ್ ಮಾಧ್ಯಮಗೋಷ್ಠಿಯನ್ನು ಆಯೋಜಿಸಿ ಹೇಳಿದ್ದಾ.
 
ಕ್ಯಾಲೆಂಡರ್‌ನಲ್ಲಿ ಗಾಂಧಿ ಬದಲು ಮೋದಿ ಚಿತ್ರ ಬಳಸಿದ್ದು ಒಳ್ಳೆಯ ಕೆಲಸ. ಗಾಂಧಿ ಚಿತ್ರ ಬಳಸಿದ್ದಕ್ಕೆ ಖಾದಿ ಉದ್ಯಮ ಮುಳುಗಿ ಹೋಗಿತ್ತು. ಗಾಂಧಿ ಚಿತ್ರ ಇರುವವರೆಗೂ ಅದು ಚೇತರಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಮೋದಿ ಅವರ ಬ್ರ್ಯಾಂಡ್‌ ನೇಮ್‌ ಗಾಂಧಿಗಿಂತ ಮೀರಿ ಬೆಳೆದಿದೆ. ನೋಟುಗಳಲ್ಲಿ ಗಾಂಧಿ ಫೋಟೋವಿದ್ದುದರಿಂದಲೇ ನೋಟುಗಳು ಅಮಾನ್ಯವಾದವು. ಮುಂದಿನ ದಿನಗಳಲ್ಲಿನೋಟುಗಳಿಂದಲೂ ಗಾಂಧಿ ಚಿತ್ರ ಮರೆಯಾಗಲಿದೆ, ವಿಜ್ ಹೇಳಿಕೆ ನೀಡಿದ್ದರು.
 
ಇದು ವಿರೋಧ ಪಕ್ಷಗಳು ಸೇರಿದಂತೆ ದೇಶಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾದಿತ್ತು. ಬಿಜೆಪಿ ಇದಕ್ಕೂ ಮತ್ತು ಪಕ್ಷಕ್ಕೂ, ಸರ್ಕಾರಕ್ಕೂ ಏನೂ ಸಂಬಂಧವಿಲ್ಲ ಎಂದು ದೂರ ಕಾಯ್ದುಕೊಂಡಿತ್ತು. 
 
ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ನಿಗಮದ (ಕೆವಿಐಸಿ) ಈ ವರ್ಷದ ಕ್ಯಾಲೆಂಡರ್‌ ಮತ್ತು ಡೈರಿಗಳಲ್ಲಿ ಮಹಾತ್ಮ ಗಾಂಧಿ ಚಿತ್ರದ ಬದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚರಕ ಹಿಡಿದಿರುವ ಚಿತ್ರ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿ ವಿಜ್ ಈ ರೀತಿಯ ಹೇಳಿಕೆಯನ್ನು ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ