ಉತ್ತರ ಪ್ರದೇಶ: ಉತ್ತರ ಪ್ರದೇಶದ ಹತ್ರಾಸ್‌ನ ಧಾರ್ಮಿಕ ಕಾರ್ಯಕ್ರಮಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಲಾಗಿದೆ ಎಂದು ಅಲಿಗಢ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಶಲಭ್ ಮಾಥುರ್ ಗುರುವಾರ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಂಧನಕ್ಕೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದು ಅಲಿಗಢ ಐಜಿ ತಿಳಿಸಿದ್ದಾರೆ.
ಸಾವಿನ ಸಂಖ್ಯೆ 121 ರಷ್ಟಿದೆ. ಎಲ್ಲಾ ದೇಹಗಳನ್ನು ಗುರುತಿಸಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಮಾಥುರ್ ಹೇಳಿದರು.
ಕಾಲ್ತುಳಿತ ಸಂಭವಿಸಿದಾಗ, ಈಗ ಬಂಧಿತರಾಗಿರುವ ಆರು 'ಸೇವಾದಾರರು' ಸ್ಥಳದಿಂದ ಓಡಿಹೋಗಿದ್ದರು. ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಂಧನಕ್ಕೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗುತ್ತಿದೆ, ಶೀಘ್ರದಲ್ಲೇ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗುವುದು. ಪಿತೂರಿಯಿಂದ ಈ ಘಟನೆ ನಡೆದಿದ್ದರೆ ಅವರ ವಿರುದ್ಧವೂ ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದರು.
ಬಂಧಿತ ಆರು ಆರೋಪಿಗಳಲ್ಲಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಕರಣ ಸಂಬಂಧ ರಾಹ್ಬರಿ ಸಿಂಗ್ ಯಾದವ್, ಭೂಪೇಂದರ್ ಸಿಂಗ್ ಯಾದವ್, ಮೇಘ್ ಸಿಂಗ್, ಮಂಜು ಯಾದವ್, ಮುಕೇಶ್ ಕುಮಾರ್, ಮತ್ತು ಮಂಜು ದೇವಿ ಅವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಂಘಟನಾ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು 'ಸೇವಾದಾರರು' ಎಂದು ಕೆಲಸ ಮಾಡಿದ್ದಾರೆ.