ಒಂದು ಪೆಗ್ ಲಿಮಿಟ್ ನ ಎರಡು ಪೆಗ್ ಗೆ ಏರಿಸಬೇಕು-ವಾಸನ್
ಸಿಲಿಕಾನ್ ಸಿಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಸಿಟಿ ನೈಟ್ ಲೈಫ್ ಗೂ ಪ್ರಖ್ಯಾತಿ ಪಡೆದಿದೆ. ಸರ್ಕಾರಕ್ಕೆ ಕಮರ್ಷಿಯಲ್ ಟ್ಯಾಕ್ಸ್ ಹೊರತು ಪಡಿಸಿ ಅಬಕಾರಿ ಹೆಚ್ಚು ರೆವೆನ್ಯು ಕೊಡ್ತಿದೆ. ಎಲ್ಲರಿಗೂ ಬೇಕಾಗಿರೊ ಅಬಕಾರಿ ಇಲಾಖೆ ಯಾರಿಗೂ ಬೇಡದಂತಿದೆ. ಮಧ್ಯಪ್ರಿಯರು ಸಂಕಷ್ಟದಲ್ಲಿದ್ದು, ಡ್ರಂಕ್ ಅಂಡ್ ಡ್ರೈವ್ ಭಯದಲ್ಲಿ ಮಧ್ಯಮಾರಾಟ ಸಾಕಷ್ಟು ಕುಂಠಿತವಾಗಿದೆ. ಆದ್ರಿಂದ ಡ್ರಂಕ್ ಅಂಡ್ ಡ್ರೈವ್ ಗೆ ಇರುವ ಒಂದು ಪೆಗ್ ಲಿಮಿಟ್ ನ ಎರಡು ಪೆಗ್ ಗೆ ಏರಿಸಬೇಕು ಎಂದು ಮನವಿ ಮಾಡಿದ್ರು.ಲಿಕ್ಕರ್ ಅಸೋಸಿಯೇಷನ್ ಸದಸ್ಯ ವಾಸನ್ ಕಮಿಷನರ್ ಬಿ.ದಯಾನಂದ್ ಗೆ ಸಾರ್ವಜನಿಕವಾಗಿ ಮನವಿ ಸಲ್ಲಿಸಿದ್ರು. FKCCI ನಲ್ಲಿ ಇಂದು ನಡೆದ ಕಮಿಷನರ್ ಮತ್ತು ಉದ್ಯಮಿಗಳ ಸಂವಾದದಲ್ಲಿ ಕಮಿಷನರ್ ಗೆ ಈ ಮನವಿ ಸಲ್ಲಿಸಲಾಯ್ತು.ಆದ್ರೆ ಕಮಿಷನರ್ ಈಮನವಿಯನ್ನ ನಗು ನಗುತ್ತಲೆ ತಳ್ಳಿ ಹಾಕಿದ್ರು.