ಅವನು ರೇಪ್ ಮಾಡ್ದ, ಇವನೂ ರೇಪ್ ಮಾಡ್ದ: ನೊಂದ ಯುವತಿ ಆತ್ಮಹತ್ಯೆ

ಸೋಮವಾರ, 20 ನವೆಂಬರ್ 2023 (12:36 IST)
ಯುವತಿ ತನ್ನ ಕೋಣೆಯಲ್ಲಿರುವ ಫ್ಯಾನ್‌ಗೆ ದುಪ್ಪಟ್ಟಾದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ನೇಣು ಹಾಕಿಕೊಳ್ಳುವ ಮುನ್ನ ಯುವತಿ ಅತ್ಯಾಚಾರವೆಸಗಿದ್ದವರ ವಿವರಗಳನ್ನು ಬರೆದಿದ್ದ ಪತ್ರದಲ್ಲಿ ಬಹಿರಂಗಪಡಿಸಿದ್ದರಿಂದ ಇಬ್ಬರು ಆರೋಪಿಗಳನ್ನುಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ. 
 
ಹಿರಿಯ ಸಹೋದರಿಯ ವಿವಾಹ ಸಮಾರಂಭದ ಸಂದರ್ಭದಲ್ಲಿ ವರನಾಗಿದ್ದ ಭಾವನೇ ತನ್ನ ಮೇಲೆ ರೇಪ್ ಮಾಡಿದ್ದಲ್ಲದೇ, ತನ್ನ ಬಾಯ್‌ಫ್ರೆಂಡ್ ಕೂಡಾ ವಿವಾಹವಾಗುವ ಆಮಿಷ ತೋರಿಸಿ ಅತ್ಯಾಚಾರವೆಸಗಿ ಕೈಕೊಟ್ಟಿದ್ದರಿಂದ ನೊಂದು ನೇಣಿಗೆ ಶರಣಾಗುತ್ತಿದ್ದೇನೆ ಎಂದು ಯುವತಿಯೊಬ್ಬಳು ಪತ್ರದಲ್ಲಿ ಬರೆದು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.  
 
ಪೊಲೀಸ್ ಮೂಲಗಳ ಪ್ರಕಾರ,  ಯುವತಿ ತನ್ನ ಪೋಷಕರೊಂದಿಗೆ ವಕೋಲಾ ಸಾಂತಾಕ್ರೂಜ್ (ಪೂರ್ವ)ಪ್ರದೇಶದಲ್ಲಿ ವಾಸವಾಗಿದ್ದು ವಿಲೆ ಪಾರ್ಲೆಯಲ್ಲಿರುವ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದಳು
 
ಮೃತಳ ತಾಯಿ ರಾತ್ರಿ 9.30ಕ್ಕೆ ಮನೆಗೆ ಬಂದಾಗ ಮಗಳ ಕೋಣೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿರುವುದು ಕಂಡು ಬಂದಿದೆ. ಹಲವು ಬಾರಿ ಕರೆದರು ಪುತ್ರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಪತಿಯನ್ನು ಕೂಗಿ ಕರೆದಿದ್ದಾರೆ. ನಂತರ ಕೋಣೆಯ ಬಾಗಿಲು ಮುರಿದು ನೋಡಿದಾಗ  ಪುತ್ರಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ತನಿಖೆ ನಡೆಸಿದಾಗ ಬಾಲಕಿ ಹಿಂದಿ ಭಾಷೆಯಲ್ಲಿ ಪತ್ರ ಬರೆದಿಟ್ಟಿರುವುದು ಪತ್ತೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ