2 ವರ್ಷಗಳ ಕಾಲ ವಿದ್ಯಾರ್ಥಿನಿಯನ್ನು ಲೈಂಗಿಕ ಸುಖಕ್ಕೆ ಬಳಸಿಕೊಂಡ ಶಿಕ್ಷಕ

ಸೋಮವಾರ, 20 ನವೆಂಬರ್ 2023 (12:13 IST)
25 ವರ್ಷ ವಯಸ್ಸಿನ ಆರೋಪಿ ಶಿಕ್ಷಕ ಕಳೆದ ಎಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಆರೋಪಿ ಶಿಕ್ಷಕ ಶಾಲೆಯ ಬಾಲಕಿಯರಿಗೆ ಟ್ಯೂಶನ್ ಹೇಳಿ ಕೊಡುತ್ತಿದ್ದರಿಂದ ಇತರ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿರಬಹುದು ಎನ್ನುವ ಶಂಕೆಯಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಖಾಸಗಿ ಶಾಲೆಯಲ್ಲಿ ಶಿಕ್ಷಕನೊಬ್ಬ 13 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದರಿಂದ ನೊಂದ ಬಾಲಕಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಹೇಯ ಘಟನೆ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಪೂರ್ವ ದೆಹಲಿಯ ಪ್ರದೇಶದ ನಿವಾಸಿಯಾಗಿದ್ದ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಸೆಕ್ಸ್ ಕುರಿತಂತೆ ಬಂದ ವಾಟ್ಸ್‌ಪ್ ಸಂದೇಶಗಳನ್ನು ಕಂಡ ಹೌಹಾರಿದ ಕುಟುಂಬದವರು ಮಗಳನ್ನು ವಿಚಾರಣೆ ನಡೆಸಿದಾಗ ಆತಂಕಗೊಂಡ ಆಕೆ ಆತ್ಮಹತ್ಯೆಯ ವಿಫಲ ಪ್ರಯತ್ನ ನಡೆಸಿದ್ದಾಳೆ.
 
ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿರುವುದು ಸಾಬೀತಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆದರೆ, ವಿದ್ಯಾರ್ಥಿನಿಗೆ ಕೆಟ್ಟ ಹೆಸರು ಬರುವ ಹಿನ್ನೆಲೆಯಲ್ಲಿ ಆಕೆಯ ಗೌಪ್ಯತೆಯನ್ನು ಕಾಪಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ