ನೆರೆಮನೆಯಾತನಿಂದಲೇ ಹದಿಹರೆಯದ ಯುವತಿಯ ಮೇಲೆ ರೇಪ್

ಸೋಮವಾರ, 20 ನವೆಂಬರ್ 2023 (10:49 IST)
ಕೋಲ್ಕತಾದ ಸೋನಾಗಾಚಿ ಪ್ರದೇಶದ ನಿವಾಸಿಯಾದ ಆರೋಪಿ ಗಿರೀಶ ರಾಜಾ ಕೀಟ ನಿಯಂತ್ರಣ ಕಂಪನಿಯ ಉದ್ಯೋಗಿಯಾಗಿದ್ದಾನೆ.  ಪೀಡಿತ ಬಾಲಕಿಯ ಪಾಲಕರು ನೀಡಿನ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಕಳೆದ  ಎರಡು ತಿಂಗಳ ಹಿಂದೆ ಹುಡುಗಿಯ ಸ್ನೇಹ ಸಂಪಾದಿಸಿದ ಯುವಕ ಪೀಡಿತಳ ಪಾಲಕರ ಗಮನಕ್ಕೆ ಬಾರದಂತೆ ಆಕೆಯನ್ನು ಭೇಟಿಯಾಗುತ್ತಿದ್ದ ಮತ್ತು ಮೊಬೈಲ್ ಮೂಲಕ ಮಾತನಾಡುತ್ತಿದ್ದ ಎನ್ನಲಾಗಿದೆ. ಇದೀಗ ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಆರೋಪಿಯನ್ನು ಬಂಧಸಿದ್ದಾರೆ.
 
ಪಕ್ಕದ ಮನೆಯ ನಿವಾಸಿಯಾದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ 32 ವರ್ಷದ ಯುವಕನನ್ನು  ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
 
ಕಳೆದ ಗುರುವಾರ  ಮಧ್ಯಾಹ್ನ 3, 30 ರ ಸಮಯದಲ್ಲಿ ಆತ ಆಕೆಯ ಮನೆಗೆ ಹೋಗಿದ್ದ . ಆ ಸಮಯದಲ್ಲಿ ಆಕೆಯ ತಂದೆ- ತಾಯಿಗಳು ಮತ್ತು ಹಿರಿಯ ಸಹೋದರಿ ಕೆಲಸಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ. 
 
ಆಕೆ ಒಬ್ಬಳೆ ಇರುವುದರ ಲಾಭ ಪಡೆದುಕೊಂಡ ಆತ ಹುಡುಗಿಯನ್ನು ಬೆಡ್ ರೂಮ್‌ಗೆ ಕೊಂಡೊಯ್ದ ಬಾಗಿಲನ್ನು ಮುಚ್ಚಿದ. ವಿರೋಧ ವ್ಯಕ್ತ ಪಡಿಸಿದ ಯುವತಿ ಆತನನ್ನು ಮನೆಯಿಂದ ಆಚೆ ಹೋಗುವಂತೆ ಹೇಳಿದ್ದಾಳೆ.  ಆದರೆ ತನಗೆ ಸಹಕರಿಸುವಂತೆ ಸತಾಯಿಸಿದ ಆತ ನಾನು ನಿನ್ನನ್ನು ಮದುವೆಯಾಗುವುದಾಗಿ ವಾಗ್ದಾನ ಮಾಡಿದ.  ಆಕೆ ರಕ್ಷಣೆಗಾಗಿ ಕೂಗಿಕೊಳ್ಳಲು ಅವಕಾಶ ನೀಡದೆ ಆಕೆಯ ಮೇಲಾತ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆ ದಿನ ಸಂಜೆ ಮನೆಗೆ ಮರಳಿದ ತಂದೆತಾಯಿಗಳಿಗೆ ಬಾಲಕಿ ನಡೆದ ಕುಕೃತ್ಯದ ವಿವರಣೆ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ