ಲೈಂಗಿಕತೆಗೆ ಸಹಕರಿಸುವಂತೆ ವಿಭಾಗದ ಮುಖ್ಯಸ್ಥ ಒತ್ತಾಯ, ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Sampriya

ಭಾನುವಾರ, 13 ಜುಲೈ 2025 (11:55 IST)
ಭುವನೇಶ್ವರ: ಲೈಂಗಿಕತೆಗೆ ಸಹಕರಿಸುವಂತೆ ನಿರಂತರವಾಗಿ ವಿಭಾಗದ ಮುಖ್ಯಸ್ಥ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಬೇಸತ್ತ ವಿದ್ಯಾರ್ಥಿನಿಯೊಬ್ಬರು ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಒಡಿಶಾದ ಬಾಲಸೋರ್‌ನ ಕಾಲೇಜುವೊಂದರಲ್ಲಿ  ನಡೆದಿದೆ.

ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಭಾಗದ ಮುಖ್ಯಸ್ಥ ಲೈಂಗಿಕತೆಗೆ ಸಹಕರಿಸುವಂತೆ ಕೇಳುತ್ತಿದ್ದ. ಇದಕ್ಕೆ ಒಪ್ಪದಿದ್ದರೆ ತನ್ನ ಭವಿಷ್ಯವನ್ನೇ ಹಾಳುಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರ ಕೊಠಡಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಬೆಂಕಿ ಹಚ್ಚಿಕೊಂಡಾಕೆ ಶೇ.95 ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಇನ್ನೂ ಆಕೆಯನ್ನು ಉಳಿಸಲು ಹೋದ ವಿದ್ಯಾರ್ಥಿನಿಗೂ ಬೆಂಕಿ ತಗಲಿದ್ದು ದೇಹದ ಶೇ.70 ರಷ್ಟು ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಭುವನೇಶ್ವರದ ಏಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ