ದೆಹಲಿಯಲ್ಲಿ ಪ್ರಬಲ ಭೂಕಂಪ! ಆತಂಕಕ್ಕೀಡಾದ ಜನತೆ

ಭಾನುವಾರ, 13 ನವೆಂಬರ್ 2022 (12:07 IST)
ನವದೆಹಲಿ : ರಾಷ್ಟ್ರ ರಾಜಧಾನಿ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ಇಂದು (ನ.12) ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಇದು ವಾರದಲ್ಲಿ 2ನೇ ಬಾರಿಗೆ ಭೂಕಂಪ ಸಂಭವಿಸಿದೆ. ದೆಹಲಿಯ ನೋಯ್ಡಾ ಹಾಗೂ ಗುರುಗ್ರಾಮ್ನಲ್ಲಿ ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ. ಆದರೆ ಭೂಕಂಪನದ ತೀವ್ರತೆಯ ಅಂದಾಜು ತಕ್ಷಣವೇ ತಿಳಿದುಬಂದಿಲ್ಲ. 

ಇದಕ್ಕೂ ಮುನ್ನ ಮಂಗಳವಾರ ನೇಪಾಳದಲ್ಲಿ ಸರಿಸುಮಾರು 6.3 ತೀವ್ರತೆಯಷ್ಟು ಭೂಕಂಪ ಸಂಭವಿಸಿತ್ತು. ಇದರಿಂದ 6 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ