ಕಾರ್ಗಿಲ್ ಯುದ್ಧದಲ್ಲಿ ಮೊದಲು ಹುತಾತ್ಮರಾದ ಯೋಧನ ಸ್ಮರಣಾರ್ಥವಾಗಿ ಸ್ಥಾಪನೆಯಾಯ್ತು ವೀರಗಲ್ಲು

ಶನಿವಾರ, 25 ಜುಲೈ 2020 (10:25 IST)
Normal 0 false false false EN-US X-NONE X-NONE

ನವದೆಹಲಿ : 1999ರಲ್ಲಿ ಕಾರ್ಗಿಲ್ ನಲ್ಲಿ ಅತಿಕ್ರಮಣ ಪ್ರವೇಶ ಮಾಡಿದ ಪಾಕಿಸ್ತಾನದ ಸೇನೆಯ ವಿರುದ್ಧ ಭಾರತೀಯ ಸೇನೆ ಯುದ್ಧ ಮಾಡಿ ಜುಲೈ 26ರಂದು ಗೆಲುವು ಸಾಧಿಸಿತ್ತು.
 

ಅಂದಿನ ಯುದ್ಧದಲ್ಲಿ  ಸುಮಾರು 572 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅವರಲ್ಲಿ ಮೊದಲು ಹುತಾತ್ಮರಾದ ಯೋಧ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾಮದ ಶಿವಬಸಯ್ಯ ಕುಲಕರ್ಣಿ. ಇವರು ಜೂನ್ 1ರಂದು ಮದ್ದುಗುಂಡುಗಳನ್ನು ಸಾಗಿಸುವಾಗ ಪಾಕಿಸ್ತಾನದ ಗುಂಡಿನ ದಾಳಿಗೆ ಮಡಿದಿದ್ದಾರೆ.

ಈ ವೀರಯೋಧನ ಸ್ಮರಣೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ 2000 ಜುಲೈ 21 ರಂದು ಚೋಳಚಗುಡ್ಡ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿರುವ ದೇವಾಲಯದ ಪಕ್ಕದಲ್ಲಿ ವೀರಗಲ್ಲನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ ಜುಲೈ 26ರಂದು ಈ ವೀರಗಲ್ಲು ಸ್ಥಳದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ