ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಹತ್ಯೆ

ಶನಿವಾರ, 1 ಏಪ್ರಿಲ್ 2023 (14:54 IST)
ಪಾಕಿಸ್ತಾನದ ಕರಾಚಿ ಮುನ್ಸಿಪಲ್ ಕಾರ್ಪೊರೇಶನ್‌ನ ನಿವೃತ್ತ ನಿರ್ದೇಶಕ ಮತ್ತು ನೇತ್ರತಜ್ಞ ಡಾ. ಬೀರ್ಬಲ್ ಗೆನಾನಿ ಅವರನ್ನು ಲಿಯಾರಿ ಎಕ್ಸ್‌ಪ್ರೆಸ್‌ವೇ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಾಳಿಯಲ್ಲಿ ಅವರ ಸಹಾಯಕ ಡಾ. ಕುರಾತ್-ಉಲ್-ಐನ್ ಗಾಯಗೊಂಡಿದ್ದಾರೆ. ಇವರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ CCTVಯಲ್ಲಿ ದಾಖಲಾಗಿದೆ. CCTV ದೃಶ್ಯವನ್ನಾಧರಿಸಿ ಇದು ಉದ್ದೇಶಪೂರ್ವಕ ಹತ್ಯೆ ಎಂದು ಶಂಕಿಸಲಾಗಿದೆ. ಈ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ವೈದ್ಯರನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ 2ನೇ ಪ್ರಕರಣ ಇದಾಗಿದೆ. ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಹೈದರಾಬಾದ್‌ನಲ್ಲಿ ವೈದ್ಯ ಧರಮ್ ದೇವ್ ರಾಥಿ ಅವರನ್ನು ತಮ್ಮ ಡ್ರೈವರ್ ಹತ್ಯೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ವೈದ್ಯ ತನ್ನ ಮನೆಯಲ್ಲಿದ್ದಾಗ ಚಾಲಕ ಚಾಕುವಿನಿಂದ ಕತ್ತು ಸೀಳಿ ಹತ್ಯೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ಹಿಂದಿನ ಘಟನೆಯಲ್ಲಿ ವೈದ್ಯ ಹಾಗೂ ಚಾಲಕನ ನಡುವೆ ಮೊದಲು ಜಗಳವಾಗಿತ್ತು. ಮನೆಗೆ ಹೋದ ಬಳಿಕ ಚಾಲಕ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು, ಕತ್ತು ಸೀಳಿ ಕೊಂದಿದ್ದಾನೆ ಎಂದು ಅಡುಗೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ