ಗೋವಾದಲ್ಲಿ ಮೇ 27 ರಿಂದ ಹಿಂದೂ ರಾಷ್ಟ್ರ ಅಧಿವೇಶನ

ಸೋಮವಾರ, 20 ಮೇ 2019 (14:38 IST)
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಈ ವರ್ಷದ ಹಿಂದೂ ರಾಷ್ಟ್ರ ಅಧಿವೇಶನ ಗೋವಾದ ಪೋಂಡಾದಲ್ಲಿ ಏರ್ಪಡಿಸಲಾಗಿದೆ.

8 ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಮೇ 27 ರಿಂದ ಜೂನ್ 8 ರವರೆಗೆ ಗೋವಾದ ಫೋಂಡಾದ ಶ್ರೀರಾಮನಾಥ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಕಾರ ಗುರುಪ್ರಸಾದಗೌಡ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದೂ ಜನಜಾಗೃತಿ ಸಮಿತಿ ಕಳೆದ 7 ಅಧಿವೇಶನದಲ್ಲಿ ಚರ್ಚಿಸಲಾದ ಹಿಂದೂರಾಷ್ಟ್ರ ಸ್ಥಾಪನೆ ಸಂಕಲ್ಪನೆಯ ವಿಷಯದ ಕುರಿತು ಈ ಬಾರಿಯ 8 ನೇ ಅಧಿವೇಶನದಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು.‌

ಅಧಿವೇಶನಕ್ಕೆ ಬಾಂಗ್ಲಾದೇಶದ ಬಾಂಗ್ಲಾದೇಶ ಮೈನಾರಿಟಿ ವಾಚ್ ನ ಅಧ್ಯಕ್ಷ ಹಾಗೂ ನ್ಯಾಯವಾದಿ ರವೀಂದ್ರ ಘೋಷ, ಹಿಂದೂ ಫಾರ್ ಜಸ್ಟೀಸ್ ನ ಅಧ್ಯಕ್ಷ ಹಾಗೂ ರಾಮಮಂದಿರ ಆಂದೋಲನದ ಹಿರಿಯ ನ್ಯಾಯವಾದಿಗಳಾದ ಹರಿಶಂಕರ ಜೈನ್, ಶಬರಿಮಲೈ ದೇವಸ್ಥಾನದ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ ನ್ಯಾಯವಾದಿ ಜೆ.ಸಾಯಿದೀಪಕ್, ವರ್ಲ್ಡ್ ಹಿಂದೂ ಫೆಡರೇಶನ್ ನ ಅಜಯಸಿಂಹ, ಕೇಂದ್ರ ಗೃಹಸಚಿವಾಲಯದ ಮಾಜಿ ಹಿರಿಯ ಅಧಿಕಾರಿ ಆರ್.ವಿ.ಎಸ್.ಮಣಿ, ಬಂಗಾಲದ ಖ್ಯಾತ ನ್ಯಾಯವಾದಿ ಜಾಯದೀಪ ಮುಖರ್ಜಿ ಸೇರಿದಂತೆ ಮುಂತಾದ ಗೌರವಾನ್ವಿತರು ಆಗಮಿಸಲಿದ್ದಾರೆ.

ಇದು ಅಷ್ಟೇ ಅಲ್ಲದೇ ೨೮ ರಾಜ್ಯಗಳು ಸಹಿತ ಬಾಂಗ್ಲಾದೇಶದಿಂದ ಹೀಗೆ 200 ಕ್ಕೂ ಅಧಿಕ ಹಿಂದೂ ಸಂಘಟನೆಗಳ 800 ಕ್ಕಿಂತ ಹೆಚ್ಚು ಹಿಂದೂತ್ವನಿಷ್ಠರು ಭಾಗಿಯಾಗಿ ಹಿಂದೂತ್ವದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ