ಇಂದು ಸಂಜೆ 5 ಗಂಟೆಗೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂತ್ಯಸಂಸ್ಕಾರ

ಸೋಮವಾರ, 18 ಮಾರ್ಚ್ 2019 (10:40 IST)
ಗೋವಾ : ಭಾನುವಾರ ನಿಧನರಾದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ  ಅಂತ್ಯಸಂಸ್ಕಾರ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.


ಪರಿಕ್ಕರ್ ಅವರ ಅಂತಿಮ ಯಾತ್ರೆ ಇಂದು ಬೆಳಗ್ಗೆ 9.30ಕ್ಕೆ ಅರಂಭವಾಗಿದ್ದು, ಪಾರ್ಥೀವ ಶರೀರವನ್ನು ಪಂಜಿಮ್ ನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಒಂದು ಗಂಟೆ ಕಾಲ ಇರಿಸಲಾಗುತ್ತದೆ. ನಂತರ ಕಲಾ ಅಕಾಡೆಮಿಯಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು ಎಂಬುದಾಗಿ ತಿಳಿದುಬಂದಿದೆ.


ಮುಖ್ಯಮಂತ್ರಿಗಳ ನಿಧನದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದ್ದು, ರಾಜ್ಯದಲ್ಲಿ ಮಾರ್ಚ್ 18 ರಿಂದ 24 ರ ವರೆಗೆ ಏಳು ದಿನಗಳ ಶೋಕಾಚರಣೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ