ರಾಮನ ಮೇಲಿನ ಹಿಂದೂಗಳ ನಂಬಿಕೆ ಪ್ರಶ್ನಾತೀತ -ಸುಪ್ರೀಂಕೋರ್ಟ್

ಶನಿವಾರ, 9 ನವೆಂಬರ್ 2019 (10:46 IST)
ನವದೆಹಲಿ: 1500 ಪುಟಗಳ ತೀರ್ಪನ್ನು  ಸುಪ್ರೀಂಕೋರ್ಟ್ ನಲ್ಲಿ ಓದುತ್ತಿರುವ ನ್ಯಾಯಮೂರ್ತಿಗಳು ಸಾಕಷ್ಟು ಮಹತ್ವವಾದ ಅಂಶಗಳನ್ನು ತಿಳಿಸಿದ್ದಾರೆ. ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎಂಬುದಕ್ಕೆ ಸಾಕ್ಷಿ ಇಲ್ಲ. ಈ ಬಗ್ಗೆ ಪುರಾತತ್ವ ಇಲಾಖೆ ಖಚಿತವಾಗಿ ಹೇಳಿಲ್ಲ. ಹಿಂದೂಗಳು ಅಯೋಧ್ಯೆಯನ್ನು ರಾಮಜನ್ಮಭೂಮಿ ಎಂದು ನಂಬುತ್ತಾರೆ.  ರಾಮ ಅಯೋಧ್ಯೆಯಲ್ಲೆ ಹುಟ್ಟಿದ್ದ ಎಂಬುದನ್ನು ಇಸ್ಲಾಂ ಧರ್ಮವು ನಂಬುತ್ತೆ. ಇದೇ ಜಾಗವನ್ನು ಮುಸ್ಲಿಂರು ಬಾಬ್ರಿ ಮಸೀದಿ ಎನ್ನುತ್ತಾರೆ.




ರಾಮನ ಮೇಲಿನ ಹಿಂದೂಗಳ ನಂಬಿಕೆ ಪ್ರಶ್ನಾತೀತ ಎಂದು ಕೋರ್ಟ್ ಹೇಳಿದೆ.  ನಂಬಿಕೆ ನೈಜವಾಗಿದ್ದಾಗ ಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ. ನಂಬಿಕೆ ಆದಾರದಲ್ಲಿ ಭೂ ಮಾಲೀಕತ್ವ ನಿರ್ಧರಿಸುವುದು ಕಷ್ಟ. ಜಾಗದ ಮಾಲೀಕತ್ವ ಕಾನೂನಿನ ಮೂಲಕವೇ ನಿರ್ಧಾರವಾಗಬೇಕು ಎಂದು ಕೋರ್ಟ್ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ