ಬ್ರಿಟನ್ ಬ್ರಿಟಿಷರ ರಾಷ್ಟ್ರದಂತೆ, ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ: ಭಾಗವತ್
ಮಧ್ಯಪ್ರದೇಶ: ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇದರ ಅರ್ಥ ಹಿಂದೂಯೇತರರಿಗೆ ಅಲ್ಲ ಎಂದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿಂದೂ ಎಂಬ ಪದವು ಭಾರತ ಮಾತೆಯ ಎಲ್ಲಾ ಮಕ್ಕಳು, ಭಾರತೀಯ ಪೂರ್ವಜರ ವಂಶಸ್ಥರು ಹಾಗೂ ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ಎಲ್ಲರನ್ನೂ ಒಳಗೊಂಡಿದೆ ಎಂದು ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.