ನವದೆಹಲಿ: ಭಾರತೀಯ ಪುರುಷ ಹಾಕಿ ತಂಡದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಆಟಗಾರ ಸರ್ದಾರ ಸಿಂಗ್
ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ವಿದಾಯ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಸರ್ದಾರ ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟ ಬೆನ್ನಲ್ಲೇ ಸರ್ದಾರ್ ಅವರಿಂದ ಇಂತಹದೊಂದು ನಿರ್ಧಾರ ಪ್ರಕಟವಾಗಿದೆ.
‘ಹೌದು, ನಾನು ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಸಲ್ಲಿಸಲು ನಿರ್ಧರಿಸಿದ್ದೇನೆ. ನನ್ನ ವೃತ್ತಿ ಬದುಕಿನಲ್ಲಿ ಬೇಕಾದಷ್ಟು ಹಾಕಿ ಆಡಿದ್ದೇನೆ. 12 ವರ್ಷಗಳ ಸುದೀರ್ಘ ಬದುಕು. ಇದೀಗ ಯುವ ಆಟಗಾರರು ಹಾಕಿ ಸ್ಟಿಕ್ ಹಿಡಿಯುವ ಸಮಯ ಬಂದಿದೆ" ಎಂದು ಸರ್ದಾರ್ ವಿದಾಯದ ಸಂದೇಶದಲ್ಲಿ ಹೇಳಿದ್ದಾರೆ.
ಚಂಡೀಗಡದಲ್ಲಿರುವ ನನ್ನ ಕುಟುಂಬ, ಸ್ನೇಹಿತರು ಹಾಗೂ ಹಾಕಿ ಇಂಡಿಯಾ ಜೊತೆ ಸಮಾಲೋಚನೆ ಮಾಡಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಹಾಕಿಯೇತರ ಜೀವನದ ಬಗ್ಗೆ ಚಿಂತಿಸಲು ಇದು ಸಕಾಲ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.