ಜಮ್ಮು-ಕಾಶ್ಮೀರದಲ್ಲೂ ಮನೆ, ರಸ್ತೆಗಳು ಬಿರುಕು!

ಶನಿವಾರ, 4 ಫೆಬ್ರವರಿ 2023 (11:11 IST)
ಶ್ರೀನಗರ : ಉತ್ತರಾಖಂಡದ ಜೋಶಿಮಠದಲ್ಲಿ ಮನೆಗಳು, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡು ಅನಾಹುತ ಸೃಷ್ಟಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲೂ ದೊಡ್ಡ ಮಟ್ಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.
 
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಮನೆ, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಇದರೊಂದಿಗೆ ಭೂಮಿ ಕುಸಿತವಾಗಿರುವುದೂ ಕಂಡುಬಂದಿದೆ.

ಕಳೆದ ವರ್ಷ ಡಿಸೆಂಬರ್ ವೇಳೆ ಮನೆಯೊಂದರಲ್ಲಿ ಕಾಣಿಸಿಕೊಂಡ ಬಿರುಕುಗಳು ಈಗ ವ್ಯಾಪಿಸಲು ಪ್ರಾರಂಭಿಸಿದೆ ಎಂದು ದೋಡಾದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಅಥರ್ ಅಮೀನ್ ಜರ್ಗರ್ ಹೇಳಿದ್ದಾರೆ.

ದೋಡಾ ಜಿಲ್ಲೆಯ ಮನೆಯೊಂದರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದು ವ್ಯಾಪಿಸುತ್ತಿದ್ದು, ಎರಡು ದಿನಗಳಲ್ಲಿ 6 ಕಟ್ಟಡಗಳು ಬಿರುಕು ಬಿಟ್ಟಿವೆ. ಈ ಬಿರುಕುಗಳನ್ನು ಸರಿಪಡಿಸಿದ ಪ್ರದೇಶಗಳಲ್ಲಿ ಕೆಲ ಭಾಗಗಳು ಮುಳುಗಡೆಯಾಗುವ ಆತಂಕ ಶುರುವಾಗಿದೆ ಎಂದು ಜರ್ಗರ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ