India Pakistan: ಒಂಭತ್ತನೇ ಬಾರಿ ಗಡಿಯಲ್ಲಿ ಪಾಕಿಸ್ತಾನ ದಾಳಿ: ಭಾರತೀಯ ಸೇನೆ ಏನು ಮಾಡಿದೆ ನೋಡಿ
ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಭಾರತ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಮರ್ಮಾಘಾತ ನೀಡಿದೆ. ಸಿಂಧೂ ನದಿ ಒಪ್ಪಂದ ಮುರಿದ ಬಳಿಕ ಪಾಕಿಸ್ತಾನ ಕ್ಯಾತೆ ಮಿತಿ ಮೀರಿದೆ. ಗಡಿಯಲ್ಲಿ ಬೇಕೆಂದೇ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಬಾರಾಮುಲ್ಲಾ, ಉರಿ, ಪುಲ್ವಾಮಾ ಗಡಿಯಲ್ಲಿ ಪಾಕಿಸ್ತಾನ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡಾ ದಾಳಿ ನಡೆಸಿದೆ.
ನಿನ್ನೆ ಒಂಭತ್ತನೇ ಬಾರಿಗೆ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ. ಮೇ 2 ರಿಂದ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ಪಾಕಿಸ್ತಾನದ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಗುಂಡಿನ ಮೂಲಕವೇ ಪ್ರತ್ಯುತ್ತರ ಕೊಟ್ಟಿದೆ.