ಯೂಟ್ಯೂಬ್​ನಿಂದ ಗಳಿಸಿದ ಆದಾಯಕ್ಕೆ ತೆರಿಗೆ ಎಷ್ಟು?

ಮಂಗಳವಾರ, 25 ಜುಲೈ 2023 (14:05 IST)
ಈಗ ಇನ್ಸಾಗ್ರಾಮ್ ರೀಲ್ಸ್, ಯೂಟ್ಯೂಬ್ ವಿಡಿಯೋಗಳ ಮೂಲಕ ಬಹಳ ಮಂದಿ ಆದಾಯ ಪಡೆಯುತ್ತಿದ್ದಾರೆ. ಈ ಆದಾಯಕ್ಕೆ ತೆರಿಗೆ ಪಾವತಿಸಬೇಕಾ? ಹೌದಾದರೆ ಎಷ್ಟು ತೆರಿಗೆ ಪಾವತಿಸಬೇಕು? ಯಾವ ಐಟಿಆರ್ ಅರ್ಜಿ ಬಳಸಬೇಕು ಎಂಬಿತ್ಯಾದಿ ಗೊಂದಲ ಇರಬಹುದು.
 
ವಿಡಿಯೋ ಪ್ಲಾಟ್ಫಾರ್ಮ್ಗಳಿಂದ ಆದಾಯ ಪಡೆಯುತ್ತಿರುವವರಲ್ಲಿ ಬಹುತೇಕರು ಪಾರ್ಟ್ಟೈಮ್ ಆಗಿ ವಿಡಿಯೋ ಮಾಡುವವರೇ ಇದ್ದಾರೆ. ಇನ್ನೂ ಕೆಲವರಿಗೆ ಇದೇ ಪ್ರಮುಖ ಆದಾಯ ಮೂಲವಾಗಿರಬಹುದು. ಇದೆಲ್ಲದಕ್ಕೂ ಪ್ರತ್ಯೇಕ ತೆರಿಗೆ ಇರುತ್ತದೆ.

ನೀವು ನೌಕರಿಯಲ್ಲಿದ್ದು, ಬಿಡುವಿನ ಸಮಯದಲ್ಲಿ ವಿಡಿಯೋ ಮಾಡಿ ಅದರ ಮೂಲಕ ಅಲ್ಪಸ್ವಲ್ಪ ಆದಾಯ ಪಡೆಯುತ್ತಿದ್ದರೆ ‘ಇನ್ಕಮ್ ಫ್ರಂ ಅದರ್ ಸೋರ್ಸಸ್’ ಎಂದು ತೋರಿಸಬೇಕು.

ಈ ವಿಡಿಯೋ ಪ್ಲಾಟ್ಫಾರ್ಮ್ಗಳಿಂದಲೇ ಹೆಚ್ಚಿನ ಆದಾಯ ಬರುತ್ತಿದ್ದರೆ, ಅಂದರೆ ಪ್ರಮುಖ ಆದಾಯ ಮೂಲವಾಗಿದ್ದರೆ ಆಗ ಅದನ್ನು ಬ್ಯುಸಿನೆಸ್ ಇನ್ಕಮ್ ಆಗಿ ಪರಿಗಣಿಸಲಾಗುತ್ತದೆ. ಅದಕ್ಕೆ ‘ಪ್ರಾಫಿಟ್ಸ್ ಅಂಡ್ ಗೇಯ್ಸ್ ಆಫ್ ಬ್ಯುಸಿನೆಸ್ ಆರ್ ಪ್ರೊಫೆಷನ್’ ಅಡಿಯಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.

ಯೂಟ್ಯೂಬ್ ನಿಮಗೆ ಪ್ರಮುಖ ಆದಾಯ ಮೂಲವಾಗಿದ್ದರೆ ನೀವು ಯಾವ ರೀತಿಯ ವಿಡಿಯೋ ಹಾಕುತ್ತೀರಿ ಎಂಬುದರ ಮೇಲೆ ಅದು ಬ್ಯುಸಿನೆಸ್ ಎಂದು ಪರಿಗಣಿಸುವುದೋ ಅಥವಾ ಪ್ರೊಫೆಷನ್ ಎಂದು ಪರಿಗಣಿಸುವುದೋ ನಿರ್ಧರಿಸಬೇಕಾಗುತ್ತದೆ. ನಿಮ್ಮ ವಿಡಿಯೊ ತಯಾರಿಕೆಯಲ್ಲಿ ವಿಸೇಷ ತರಬೇತಿಯ ತಾಂತ್ರಿಕ ಪರಿಣಿತಿ ಅಗತ್ಯ ಇದ್ದರೆ ಅದನ್ನು ವೃತ್ತಿಪರ ಕೆಲಸದ ಆದಾಯ ಎಂದು ಪರಿಗಣಿಸಲಾಗುತ್ತದೆ. ಇಲ್ಲದಿದ್ದರೆ ಬ್ಯುಸಿನೆಸ್ ಇನ್ಕಮ್ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ